Advertisement

ಜೆಡಿಎಸ್‌ ಅಭ್ಯರ್ಥಿ ಅಶ್ವಿ‌ನ್‌ಕುಮಾರ್‌ ನಾಮಪತ್ರ ಸಲ್ಲಿಕೆ

12:37 PM Apr 21, 2018 | Team Udayavani |

ತಿ.ನರಸೀಪುರ: ಕ್ಷೇತ್ರದ ಬಿಎಸ್ಪಿ ಬೆಂಬಲಿತ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಎಂ.ಅಶ್ವಿ‌ನ್‌ಕುಮಾರ್‌ ಶುಕ್ರವಾರ ನಾಮಪತ್ರ ಸಲ್ಲಿಸಿದರು.  ಪಟ್ಟಣದ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಬಿಎಸ್ಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಎಂ.ಅಶ್ವಿ‌ನ್‌ಕುಮಾರ್‌ ಚುನಾವಣಾಧಿಕಾರಿ ಮಂಜುನಾಥ್‌ರಿಗೆ ಉಮೇದುವಾರಿಕೆ ಸಲ್ಲಿಸಿದರು.

Advertisement

ನಾಮಪತ್ರ ಸಲ್ಲಿಸಿದ ಬಳಿಕ ಎಂ.ಅಶ್ವಿ‌ನ್‌ಕುಮಾರ್‌ ಮಾತನಾಡಿ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಈ ಬಾರಿ ಹಣಬಲ ಮತ್ತು ಜನಬಲದ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಮತ ಕೊಟ್ಟು ಗೆಲ್ಲಿಸಿದ ಜನರನ್ನು ಸಚಿವ ಮಹದೇವಪ್ಪ ನಿರ್ಲಕ್ಷಿಸಿದ್ದು, ಅವರ ಪುತ್ರ ಸುನೀಲ್‌ ಬೋಸ್‌ ದುರಾಡಳಿತ ನಡೆಸಿರುವುದರಿಂದ ಜನರು ಬದಲಾವಣೆ ಚಿಂತನೆಯಲ್ಲಿದ್ದಾರೆ. ಪಕ್ಷದ ವರಿಷ್ಠರು ಸೇರಿದಂತೆ ಅನೇಕ ಗಣ್ಯರು ಹಾಗೂ ತಾರಾ ಪ್ರಚಾರಕರು ಎರಡು ಸುತ್ತಿನಲ್ಲಿ ಆಗಮಿಸಿ ತಮ್ಮ ಪರ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮೈತ್ರಿಕೂಟದ ಬಲ ಪ್ರದರ್ಶನ: ಕ್ಷೇತ್ರವನ್ನು ಗೆಲ್ಲಲು ಹಾಗೂ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪಅವರಿಗೆ ಸಡ್ಡು ಹೊಡೆಯಲು ಸಜ್ಜಾಗಿರುವ ಜೆಡಿಎಸ್‌-ಬಿಎಸ್ಪಿ ಮೈತ್ರಿಕೂಟ ನಾಮಪತ್ರ ಸಲ್ಲಿಸುವ ಮೊದಲು ಸಹಸ್ರಾರು ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಬೆಂಬಲಿಗರನ್ನು ಸೇರಿಸುವ ಮೂಲಕ ಬಲವನ್ನು ಪ್ರದರ್ಶಿಸಿದರು. 

ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌.ಸಿದ್ದಾರ್ಥ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ಪ್ರಭುಸ್ವಾಮಿ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಹಿರಿಯ ಮುಖಂಡರಾದ ಚಿಕ್ಕಜವರಪ್ಪ, ಎಂ.ಆರ್‌.ಶಿವಮೂರ್ತಿ, ಕೋಟಿ ನಾಗರಾಜು, ಜೆಡಿಎಸ್‌ ಕಾರ್ಯಾಧ್ಯಕ್ಷ ಬಿ.ಆರ್‌.ಮಂಜುನಾಥ್‌, ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಬಿ.ಆರ್‌.ಪುಟ್ಟಸ್ವಾಮಿ, ಕ್ಷೇತ್ರಾಧ್ಯಕ್ಷ ಎಸ್‌.ಕೆ.ರಾಜೂಗೌಡ,  ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next