Advertisement

ಗುದ್ದಲಿ ಪೂಜೆ ಗುದ್ದಾಟ:ಮಂಡ್ಯದಲ್ಲಿ ಕೈ-ಜೆಡಿಎಸ್‌ ಫೈಟ್‌

09:51 AM Jul 06, 2019 | Vishnu Das |

ಮಳವಳ್ಳಿ: ಮೈತ್ರಿ ಪಕ್ಷಗಳ ಕಲಹದಿಂದ ಮಂಡ್ಯ ಮತ್ತೆ ಸುದ್ದಿಯಾಗಿದ್ದು, ಕಾಮಗಾರಿಯೊಂದರ ಗುದ್ದಲಿ ಪೂಜೆಗೆ ಸಂಬಂಧಿಸಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಗುದ್ದಾಟ ನಡೆದಿದೆ.

Advertisement

ಮಳವಳ್ಳಿ ಜೆಡಿಎಸ್‌ ಶಾಸಕ ಅನ್ನದಾನಿ ಅವರು ಕಾಮಗಾರಿಯೊಂದರ ಗುದ್ದಲಿ ಪೂಜೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಆಗಮಿಸಿ ಈ ಕಟ್ಟಡ ಕಾಮಗಾರಿಗೆ ಈ ಹಿಂದೆಯೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅಂದಿನ ಕಾಂಗ್ರೆಸ್‌ ಶಾಸಕರಾಗಿದ್ದ ನರೇಂದ್ರ ಸ್ವಾಮಿ ಅವರು ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ತಕರಾರು ತೆಗೆದಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ನಡೆದಿದೆ. ಅವಾಚ್ಯ ಶಬ್ಧಗಳನ್ನೂ ಬಳಸಿ ಬೈದಾಡಿಕೊಂಡಿದ್ದಾರೆ. ಮಾರಾಮಾರಿ ನರಡೆಸಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಕಾಂಗ್ರೆಸ್‌ ನಾಯಕರ ನರೇಂದ್ರ ಸ್ವಾಮಿ ಅನ್ನದಾನಿ ಅವರ ವಿರುದ್ಧ ಸ್ವೀಕರ್‌ಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next