Advertisement
ಪಟ್ಟಣದ ಚನ್ನಾಂಬಿಕ ಕನ್ವನ್ಷೇನಲ್ ಹಾಲ್ ನಲ್ಲಿ ನಡೆದ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಪ್ರಸ್ತುತ ಈ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಶಾಸಕ ರೇವಣ್ಣ ಅವರ ತಿರ್ಮಾನೆವೇ ಅಂತಿಮ ಎಂದು ತಿಳಿಸಿದರು.
Related Articles
Advertisement
ಪ್ರಜ್ವಲ್ ರೇವಣ್ಣ ಅವರ ಮಾತು ಮುಗಿಯುತಿದ್ದಂತೆ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಕಾರ್ಯಕರ್ತರ ಅನಿಸಿಕೆ ಮತ್ತು ಮುಖಂಡರು ಮಾತನ್ನು ಆಲಿಸಿದ್ದೇನೆ. ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ನಡೆದಿರುವ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭವಾನಿ ರೇವಣ್ಣ ಅವರ ಹೆಸರು ಬರುತ್ತಿದೆ. ನಮ್ಮ ಕಾರ್ಯಕರ್ತರ ಮತ್ತು ಮುಖಂಡರ ಅನಿಸಿಕೆಗಳನ್ನು ದೇವೇಗೌಡರ ಗಮನಕ್ಕೂ ತರಲಾಗುತ್ತದೆ. ಅಂತಿಮವಾಗಿ ಗೌಡರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.
ತಾವು ಶಾಸಕರಾದ ನಂತರ ತಾಲೂಕು ಹಾಗು ಜಿಲ್ಲೆಗೆ ಅವಶ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯವೇದಿಕೆಯಲ್ಲಿ ದಲಿತ ಮುಖಂಡಲಕ್ಕೂರು ಬಸವರಾಜು, ತಾಪಂ ಮಾಜಿಸದಸ್ಯಮಲ್ಲಿಕಾರ್ಜುನ್, ತಾಲೂಕು ಜೆಡಿಎಸ್ ಅಧ್ಯಕ್ಷ ಪುಟ್ಟ ಸೋಮಪ್ಪ , ದೊಡ್ಡಮಲ್ಲೇಗೌಡ, ತಾಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ, ಪುರಸಭೆ ಅಧ್ಯಕ್ಷೇ ವೀಣಾ, ಉಪಾಧ್ಯಕ್ಷೆ ತ್ರೀಲೋಚನಾ ಹಾಜರಿದ್ದರು. ತಾಪಂ ಮಾಜಿ ಸದಸ್ಯ ಜವರೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.
ಭವಾನಿ ರೇವಣ್ಣಗೆ ಅಭೂತಪೂರ್ವ ಸ್ವಾಗತ : ಕಾರ್ಯಕರ್ತರ ಸಭೆ ಆರಂಭಗೊಂಡ ಕೆಲ ನಿಮಿ ಷಗಳ ನಂತರ ಭವಾನಿ ರೇವಣ್ಣ ಅವರು ಸಭೆಗೆ ಆಗಮಿಸಿದರು. ಅವರ ಆಗಮನ ಆಗುತ್ತಿದ್ದಂತೆ ಸಭೆಯಲ್ಲಿ ಕುಳಿತಿದ್ದವರು ಎದ್ದು ನಿಂತು ಭವಾನಿ ರೇವಣ್ಣ ಅವರನ್ನು ಗೌರವದಿಂದ ಸ್ವಾಗತಿಸಿ ವೇದಿಕೆಗೆ ಕಳುಹಿಸಿಕೊಟ್ಟರು. ಸಭೆಯಲ್ಲಿ ಹಳ್ಳಿಮೈಸೂರು ಭಾಗದ ಕಡೆಯಿಂದ ಬಾಲು, ಹೊಳೆನರಸೀಪುರ ಪಟ್ಟಣದಿಂದ ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ್, ಮುತ್ತಿಗೆರಾಜೇಗೌಡ,ಜಿಪಂ ಮಾಜಿ ಸದಸ್ಯ ಎಚ್. ವೈ.ಚಂದ್ರಶೇಖರ್ ಮತ್ತೆ ಹಲವರು ಮಾತನಾಡಿ ಭವಾನಿ ರೇವಣ್ಣ ಅವರೇ ಸೂಕ್ತ ಅಭ್ಯರ್ಥಿ ಎಂದು ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದರು. ಇನ್ನೇರಡು ಮೂರು ದಿನಗಳಲ್ಲಿ ಉಳಿದ ತಾಲೂಕುಕೇಂದ್ರಗಳಲ್ಲಿ ಪಕ್ಷದಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಯಾರೆಂಬುದನ್ನು ಪ್ರಕಟಿಸಲಾಗುವುದು. ಯಾರೊಬ್ಬರೂ ಪಕ್ಷದ ಹಿರಿಯರುಕೈಗೊಳ್ಳುವ ತಿರ್ಮಾನಕ್ಕೆ ಬದ್ಧರಾಗಿ ಅವರು ಸೂಚಿಸುವ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು. ●ರೇವಣ್ಣ. ಜೆಡಿಎಸ್ ವರಿಷ್ಠ