Advertisement

ಜೆಡಿಎಸ್‌ ಪಕ್ಷ ಬಿಡುವ ಮಾತೇ ಇಲ್ಲ 

03:58 PM Sep 27, 2021 | Team Udayavani |

ಚಿಂತಾಮಣಿ: ಜೆಡಿಎಸ್‌ ಪಕ್ಷದಲ್ಲೇ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಪರಿಣಾಮ ಎರಡು ಬಾರಿ ಶಾಸಕನಾಗಿ, ನಿಮ್ಮಗಳ ಸೇವೆ ಮಾಡುವ ಅದೃಷ್ಟ ಸಿಕ್ಕಿದೆ. ನನ್ನ ರಾಜಕೀಯ ನಿವೃತ್ತಿಯಾದರೂ ಕ್ಷೇತ್ರಬಿಟ್ಟು ಬೇರೆ ಕಡೆ ಹೋಗುವ ಜಾಯಮಾನ ನನ್ನದಲ್ಲ, ನಿಷ್ಠಾವಂತ ನಾಯಕರನ್ನು ಹುಡುಕಿ ಅವರಿಗೆ ಆರ್ಥಿಕ ನೆರವು ನೀಡಿ, ಜೆಡಿಎಸ್‌ ಶಾಸಕರನ್ನಾಗಿ ಮಾಡುತ್ತೇನೆವಿನಃ, ನಾನು ಪಕ್ಷ ಬಿಡುವ ಮಾತೇ ಇಲ್ಲ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಘೋಷಿಸಿದರು.

Advertisement

ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಕೆಲವರು ನಾನು ಜೆಡಿಎಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೇನೆ, ಜೆ.ಕೆ.ಕೃಷ್ಣಾರೆಡ್ಡಿ ಬೆಂಗಳೂರಿನಲ್ಲಿ ಕ್ಷೇತ್ರ ಗುರುತಿಸಿ ಕೊಂಡಿದ್ದಾರೆ, ಜೆಡಿಎಸ್‌ ಬಿಡುತ್ತಾರೆ, ಕಾಂಗ್ರೆಸ್‌, ಬಿಜೆಪಿಗೆ ಸೇರುತ್ತಾರೆ ಎಂದೆಲ್ಲ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ, ಅದಕ್ಕೆ ಕಿವಿಗೊಡದೇ ನಿಷ್ಠೆಯಿಂದ ಕೆಲಸ ಮಾಡಿ ಎಂದು ತಿಳಿಸಿದರು.

ಬಿ ಫಾರಂ ಮನೆಗೆ ಬರುತ್ತೆ: ಚಿಂತಾಮಣಿ ವಿಧಾನ ಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಟಿಕೆಟ್‌ ನಾನು ತರುತ್ತೇನೆ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಹೋದವರಿಗೆಲ್ಲ ಕೊಡುವುದಕ್ಕೆ ಜೆಡಿಎಸ್‌ ಬಿ ಫಾರಂ ಏನು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ, ಅದು ನಿಷ್ಠಾವಂತ ಕಾರ್ಯಕರ್ತರಿಗೆ ದೊರೆಯುವ ಅಸ್ತ್ರ. ಅದಕ್ಕೆ ನಾನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ, ಅದೇ ನಮ್ಮನ್ನು ಹುಡುಕಿಕೊಂಡು ಮನೆಗೆ ಬರುತ್ತೆ, ಅದಕ್ಕಾಗಿ ಭಯಪಡುವಂತಿಲ್ಲ, ವರಿಷ್ಠರು ಮನೆಗೆ ಕಳುಹಿಸಿಕೊಡುತ್ತಾರೆಂದು ತಿಳಿಸಿದರು.

ಅವಳಿ ಜಿಲ್ಲೆಗಳ ಉಸ್ತುವಾರಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟಿಸುವ ಹೊಣೆಯನ್ನು ವರಿಷ್ಠರು ನನಗೆ ಒಪ್ಪಿಸಿದ್ದಾರೆ. ಅದರಅನ್ವಯ ಈಗಾಗಲೇ ಮಾಲೂರಿನಲ್ಲಿ ತಟಸ್ಥಗೊಂಡಿದ್ದ ಜೆಡಿಎಸ್‌ ಪಕ್ಷಕ್ಕೆ ಒಬ್ಬ ಉತ್ತಮ ನಾಯಕನನ್ನು ಗುರುತಿಸಿ ಪಕ್ಷ ಸಂಘಟನೆಗೆ ತೊಡಗಿಸಲಾಗಿದೆ. ಅದೇ ರೀತಿ ಕೋಲಾರ ಕ್ಷೇತ್ರದಲ್ಲೂ ಒಳ್ಳೆಯ ನಾಯಕರನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಲಾಗುವುದು, ಅದೇ ರೀತಿ ಅವಳಿ ಜಿಲ್ಲೆಗಳಲ್ಲಿ ಜೆಡಿಎಸ್‌ ಬಲಗೊಳ್ಳಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಪಕ್ಷ ಆಗಿ ಉಳಿಯಲಿ: ಯಾವುದೇ ಒಂದು ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿಯಬೇಕಾದರೆ, ನಿರ್ದಿಷ್ಟವಾದ ಸದಸ್ಯತ್ವ ಹೊಂದಿರಬೇಕು, ಆದ್ದರಿಂದ ಜೆಡಿಎಸ್‌ಗೆ ಸದಸ್ಯತ್ವ ಅತ್ಯವಶ್ಯಕ. ನಮ್ಮ ತಾಲೂಕಿನಿಂದ15 ಸಾವಿರ ಸದಸ್ಯತ್ವ ಕೊಡುವುದಾಗಿ ಪಕ್ಷದ ಹೈಕಮಾಂಡ್‌ಗೆ ಮಾತು ಕೊಟ್ಟಿದ್ದೇನೆ, ಅದಕ್ಕಾಗಿ ದುಡಿಯಬೇಕು ಎಂದು ತಿಳಿಸಿದರು.

Advertisement

ತಾಪಂ, ಜಿಪಂ ಚುನಾವಣೆ ಗೆಲ್ಲಬೇಕು: ಕಳೆದ ಬಾರಿ ಕ್ಷೇತ್ರದಲ್ಲಿ ತಾಪಂ, ಜಿಪಂ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ, ಈ ಬಾರಿ ಸಂಪೂರ್ಣ ಅಧಿಕಾರ ಪಡೆಯ ಬೇಕು, ಕೇವಲ ಶಾಸಕತ್ವ ಪಡೆದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಷ್ಟವಾಗುತ್ತೆ, ಸ್ಥಳೀಯ ಸಂಸ್ಥೆಗಳ ಅಧಿಕಾರಸಿಕ್ಕಿದರೆ ವಾರ್ಡ್‌ ಮತ್ತು ಗ್ರಾಪಂ ಮಟ್ಟದಿಂದ ಅಭಿವೃದ್ಧಿ ಮಾಡಲು ಅನುಕೂಲ ಆಗುತ್ತೆ ಎಂದರು.

ಆದರಿಂದ ಈ ಬಾರಿ ತಾಪಂ, ಜಿಪಂ ಚುನಾವಣೆಯಲ್ಲಿ ಸಂಪೂರ್ಣ ಗೆಲುವು ಜೆಡಿಎಸ್‌ ಪಕ್ಷದು ಆಗಬೇಕು. ಆದ್ದರಿಂದ ಈಗಿನಿಂದಲೇ ಬೂತ್‌ ಮಟ್ಟ ದಿಂದ ಕಾರ್ಯಕರ್ತರು, ಮುಖಂಡರು ನಿಷ್ಠೆಯಿಂದ ದುಡಿಯಿರಿ ಎಂದು ವಿವರಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ದಿನ್ನುಂದಹಳ್ಳಿ ಬೈರ ರೆಡ್ಡಿ, ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಗೋಪಲ್ಲಿ ರಘುನಾಥರೆಡ್ಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಾಸುದೇವ್‌, ನಗರಸಭೆ ಮಾಜಿ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ವೆಂಕಟೇಶ್‌, ಪೆದ್ದೂರು ವಕೀಲ ಶಿವಕುಮಾರ್‌, ತುಮ್ಮಲಹಳ್ಳಿ ಸುಧಾಕರ್‌, ರಂಗೇಗೌಡ, ದೇವರಾಜ್‌, ವೆಂಕಟವಣಪ್ಪ, ರಾಜಣ್ಣ, ಆಗ್ರಹಾರ ಮುರಳಿ, ಸಾಧೀಕ್‌, ಅಬ್ಬುಗುಂಡು ಮಧು, ಮುಖಂಡರಾದ ದೊಡ್ಡ ಬೊಮ್ಮನಹಳ್ಳಿ ವೆಂಕಟರೆಡ್ಡಿ, ಅಮರ್‌, ಯನಮಲ ಪಾಡಿ ಚಂದ್ರಾರೆಡ್ಡಿ, ಕೈವಾರ ಸುಬ್ಟಾರೆಡ್ಡಿ, ಯರ್ರಕೋಟೆಮುನಿರಾಜು, ವಕೀಲ ಮುನಿರಾಜು, ಅಯಿಷಾಸುಲ್ತಾನಾ, ಕೃಷ್ಣಮೂರ್ತಿ, ಜನಾರ್ದನ್‌, ರಾಮಾಂಜಿ, ಮುನಗನಹಳ್ಳಿ ಶ್ರೀನಿವಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next