ಬೆಂಗಳೂರು : ರಸ್ತೆಯಲ್ಲಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ ವೇಳೆ ಕಳ್ಳರು 7ಲಕ್ಷ ರೂ.ಮೌಲ್ಯದ ಜೆಸಿಬಿ ಕಳ್ಳತನ ಮಾಡಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲಿ
ಮಿಲ್ಕ್ ಕಾಲೋನಿಯ ಬ್ಯಾಂಕ್ ಆಫ್ ಇಂಡಿಯಾ ಎದುರಿನ ಆರ್‌ಪಿ ರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ಜೆಸಿಬಿ ಮಾಲೀಕ ರಾಮಮೂರ್ತಿ ಅವರು ಸುಬ್ರಹ್ಮಣ್ಯ ನಗರ ಠಾಣೆಗೆ ದೂರು
ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಜೆಸಿಬಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ : ರಾಮಮೂರ್ತಿ ಎಂಬುವರು 2018ನೇ ಸಾಲಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪ್ರತಾಪ್ ರೆಡ್ಡಿ ಎಂಬುವರಿಂದ ಜೆಸಿಬಿ ವಾಹನ ಖರೀಸಿದ್ದರು. ಚಾಲಕರಾದ ಈಶ್ವರ್ ಅನಂತ, ದೇವು ಮತ್ತು ಅಂಬರೀಶ್ ಎಂಬುವರು ಈ ಜೆಸಿಬಿ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಚಾಲಕನಾದ ಲಕ್ಷ್ಮಣ್ ಎಂಬುವರನ್ನು ಇಟ್ಟುಕೊಂಡು ರಾಮಮೂರ್ತಿ ಬಾಡಿಗೆಗೆ ಓಡಿಸಿಕೊಂಡಿದ್ದರು.
ಜ.11ರಂದು ರಾತ್ರಿ 10ಗಂಟೆ ವೇಳೆ ಮಿಲ್ಕ್ ಕಾಲೋನಿಯ ಬ್ಯಾಂಕ್ ಆಫ್ ಇಂಡಿಯಾ ಎದುರಿನ ಆರ್‌ಪಿ ರಸ್ತೆಯಲ್ಲಿ ಜೆಸಿಬಿ ವಾಹನವನ್ನು ಚಾಲಕ ಲಕ್ಷ್ಮಣ್ ಮತ್ತು ರಾಮಮೂರ್ತಿ ನಿಲ್ಲಿಸಿ ತೆರಳಿದ್ದರು. ಮಾರನೆಯ ದಿನ ರಾತ್ರಿ 10 ಗಂಟೆಗೆ ಬಂದು ನೋಡಿದಾಗಲೂ ವಾಹನ ಅಲ್ಲೇ ಇತ್ತು. ಆದರೆ 13ರಂದು ಬೆಳಗ್ಗೆ 4.30ರ ಸುಮಾರಿ ನಲ್ಲಿ ಬಂದು ನೋಡಿದಾಗ ವಾಹನ ಇರಲಿಲ್ಲ ಎಂದು ರಾಮಮೂರ್ತಿ ಅವರು ಪೊಲೀಸರಿಗೆ ನೀಡಿರುವ ದೂರಿ ನಲ್ಲಿ ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಸುಬ್ರಹ್ಮಣ್ಯ ನಗರ ಠಾಣೆ ಪೋಲಿಸರು ಜೆಸಿಬಿ ಕಳ್ಳರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ : ತನ್ನ ಸಹಚರನನ್ನು ಜೈಲಿನಿಂದ ಬಿಡಿಸಲು ಹೋಗಿ ತಾವೇ ಪೊಲೀಸರ ಖೆಡ್ಡಾಕ್ಕೆ ಬಿದ್ದರು