ಹೊಸದಿಲ್ಲಿ: ಭಾರತ ತಂಡಕ್ಕೆ ತನ್ನನ್ನು ಪರಿಗಣಿಸದಿದ್ದುದಕ್ಕೆ ಸೌರಾಷ್ಟ್ರದ ಎಡಗೈ ವೇಗಿ ಜೈದೇವ್ ಉನಾದ್ಕತ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ರಣಜಿ ಟ್ರೋಫಿ ಸಾಧನೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಅವರು ನ್ಯೂಜಿಲ್ಯಾಂಡ್ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಇದೀಗ ಹುಸಿಯಾಗಿದೆ.
ರಣಜಿ ಬೌಲಿಂಗ್ ಹೀರೋ
2019-20ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಜೈದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಟೂರ್ನಿಯಲ್ಲಿ ಉನಾದ್ಕತ್ 10 ಪಂದ್ಯಗಳಿಂದ 67 ವಿಕೆಟ್ ಕಿತ್ತು ನೂತನ ದಾಖಲೆ ಸ್ಥಾಪಿಸಿದ್ದರು. ಈ ಸಾಧನೆಯಿಂದ ಅವರು ಭಾರತದ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲಿ¨ªಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ತಂಡ ಪ್ರಕಟವಾದಾಗ ಅದರಲ್ಲಿ ಉನಾದ್ಕತ್ ಹೆಸರೇ ಇರಲಿಲ್ಲ.
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಉನಾದ್ಕತ್, “ಈ ಬಾರಿಯ ಇಂಗ್ಲೆಂಡ್ ಪ್ರವಾಸಕ್ಕೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ಕಾದಿ¨ªೆ. ಆದರೆ ನನ್ನ ನಿರೀಕ್ಷೆ ಸಾಕಾರಗೊಳ್ಳಲಿಲ್ಲ. ಕಳೆದ ರಣಜಿ ಟ್ರೋಫಿಯಲ್ಲಿ 67 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿ¨ªೆ. ಇತ್ತೀಚಿನ ವರ್ಷಗಳಲ್ಲಿ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಯಾರೂ ಗಮನಿಸುವುದಿಲ್ಲ. ಇದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ತಂಡದಲ್ಲಿ ಸ್ಥಾನ ಎಂಬಂತಾಗಿದೆ’ ಎಂದು ಉನಾದ್ಕತ್ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.