ಹೊಸದಿಲ್ಲಿ: ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಆಯ್ಕೆ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸೌರಾಷ್ಟ್ರದ ವೇಗಿ ಜೈದೇವ್ ಉನಾದ್ಕತ್‌ಗೆ ಎಂದೋ ಭಾರತ ತಂಡದ ಬಾಗಿಲು ಮುಚ್ಚಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು ಹೇಳಿದ್ದು ಈಗ ಸುದ್ದಿಯಾಗುತ್ತಿದೆ.
ಇಂಥದೊಂದು ಹೇಳಿಕೆ ನೀಡಿದವರು ಭಾರತದ ಮಾಜಿ ಬೌಲರ್ ಹಾಗೂ ಸೌರಾಷ್ಟ್ರ ತಂಡದ ಮುಖ್ಯ ಕೋಚ್ ಆಗಿರುವ ಕರ್ಸನ್ ಘಾವ್ರಿ. 2019-20ರ ರಣಜಿ ಟ್ರೋಫಿ ವೇಳೆ ಬಿಸಿಸಿಐ ಆಯ್ಕೆಗಾರರ ಬಳಿ ಉನಾದ್ಕತ್‌ಗೆ ಅವಕಾಶ ಸಿಗುವ ಬಗ್ಗೆ ನಡೆಸಿದ ಚರ್ಚೆಯೊಂದನ್ನು ಫಾವ್ರಿ ಬಹಿರಂಗಪಡಿಸಿದ್ದಾರೆ.
“2019-20ರ ರಣಜಿ ಟ್ರೋಫಿ ಫೈನಲ್ ವೇಳೆ ಆಯ್ಕೆಗಾರರ ಬಳಿ ಉನಾದ್ಕತ್ ಬಗ್ಗೆ ಮಾತನಾಡಿದ್ದೆ. ಆ ವರ್ಷ ಅವರು 60ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಹೀಗಾಗಿ ಕನಿಷ್ಠ ಭಾರತ “ಎ’ ತಂಡಕ್ಕಾದರೂ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದೆ. ಆದರೆ ಇದಕ್ಕೆ ಉತ್ತರಿಸಿದ್ದ ಆಯ್ಕೆಗಾರರೊಬ್ಬರು, 30 ಆಟಗಾರರ ತಂಡ ರಚಿಸಿದರೂ ಅದರಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದರು. ಯಾಕೆ ಎಂದು ಪ್ರಶ್ನಿಸಿದೆ. ಅವರಿಗೆ ಈಗಾಗಲೇ 32 ವರ್ಷವಾಗಿದೆ. ಹೀಗಾಗಿ ಭಾರತ ತಂಡದ ಬಾಗಿಲು ಅವರಿಗೆ ಎಂದೋ ಮುಚ್ಚಿದೆ…’ ಎಂದು ಹೇಳಿದ್ದಾಗಿ ಕರ್ಸನ್ ಘಾವ್ರಿ ತಿಳಿಸಿದ್ದಾರೆ.
ಇದನ್ನೂ ಓದಿ :ಸಾವಿರಾರು ಕೋಟಿ ರೂ. ಸಾಲ ವಂಚನೆ ಆರೋಪಿ ಮೆಹುಲ್ ಚೋಕ್ಸಿ ಕೊನೆಗೂ ಸೆರೆ
“ಹಿರಿಯ ಆಟಗಾರನ ಬದಲು ಕಿರಿಯ ವೇಗಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅವರು ಕನಿಷ್ಠ 8-10 ವರ್ಷ ಕಾಲ ಭಾರತ ತಂಡದ ಪರ ಆಡಬಲ್ಲರು. ಒಂದೊಮ್ಮೆ ಉನಾದ್ಕತ್ ಅವರನ್ನು ಆಯ್ಕೆ ಮಾಡಿದರೆ ಎಷ್ಟು ವರ್ಷಗಳ ಕಾಲ ಆತ ಆಡಬಲ್ಲ…’ ಎಂದು ಆಯ್ಕೆಗಾರ ಹೇಳಿದ್ದಾಗಿ ಘಾವ್ರಿ ತಿಳಿಸಿದರು.