Advertisement
ರವಿವಾರ ಇಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು, ಶಾಸಕರು, ಸಚಿವರು ಇದ್ದು ಉಡುಪಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಎರಡೂ ಟೋಲ್ ದರ ಒಟ್ಟಾಗಿ ಪಡೆಯುವ ಹೆದ್ದಾರಿ ಇಲಾಖೆಯ ನಿರ್ಧಾರವನ್ನು ವಿರೋಧಿಸಲಾಗಿದೆ. ವಿವಿಧ ಟೋಲ್‌ಗಳಿಗೆ ಹಂಚಿ ಹಾಕುವುದಕ್ಕೂ ವಿರೋಧ ಇದೆ. ರಸ್ತೆ ನಿರ್ಮಾಣ ಕುರಿತು ಒಟ್ಟು 400 ಕೋ.ರೂ. ಪಾವತಿಸಬೇಕಿದ್ದು ಈಗಾಗಲೇ 250 ಕೋ.ರೂ. ಟೋಲ್ ಮೂಲಕ ಸಂಗ್ರಹಿಸಿ ಪಾವತಿಸಲಾಗಿದೆ. ಇನ್ನುಳಿದ 150 ಕೋ.ರೂ.ಗಳನ್ನು ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ಆಡಳಿತ ಶಿಷ್ಟಾಚಾರದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯೇ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಬೇಕಾದ ಕಾರಣ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದು ಅಲ್ಲೇ ಸ್ಪಷ್ಟ ತೀರ್ಮಾನ ಆಗಲಿದೆ. ಸಾಸ್ತಾನ ಹಾಗೂ ಹೆಜಮಾಡಿ ಟೋಲ್ ಗೇಟ್‌ನ ಅಂತರ ನಿಗದಿಗಿಂತ ಕಡಿಮೆ ಇದೆ ಎನ್ನುವುದನ್ನೂ ಚರ್ಚೆ ವೇಳೆ ಗಮನಕ್ಕೆ ತರಲಾಗಿದೆ ಎಂದರು.
Related Articles
Advertisement
ಆಯ್ಕೆ ಮಾಡುವಾಗಲೇ ಯೋಚಿಸುವ ಅನಿವಾರ್ಯ:
ಕಾರ್ಯಾಂಗ ಹೇಳಿದಂತೆಯೇ ಎಲ್ಲವನ್ನೂ ಕೇಳುವುದಾದರೆ ಶಾಸಕಾಂಗದ ಅಗತ್ಯವೇನು. ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಎನ್ನುವುದರಲ್ಲಿ ಅರ್ಥವೇ ಇಲ್ಲ. ಆದ್ದರಿಂದ ಆರಿಸುವಾಗಲೂ ಯೋಗ್ಯರನ್ನು ಆಯ್ಕೆ ಮಾಡಬೇಕು. ಅನಂತರ ಚಿಂತಿಸಿ ಪ್ರಯೋಜನ ಇಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.