Advertisement

ಜಿಲ್ಲಾದ್ಯಂತ ಸಂತ ಸೇವಾಲಾಲ ಜಯಂತಿ

11:37 AM Feb 16, 2018 | Team Udayavani |

ವಾಡಿ: ಪರಿಶಿಷ್ಟ ಜಾತಿ ಪಟ್ಟಿಯಿಂದ ರಾಜ್ಯದ ಲಂಬಾಣಿಗರನ್ನು ಕೈಬಿಡುವ ಷಡ್ಯಂತ್ರ ನಡೆದಿದೆ. ಅದನ್ನು ನಾವು ಸಹಿಸುವುದಿಲ್ಲ ಎಂದು ಮಾಜಿ ಶಾಸಕ, ಬಂಜಾರಾ ಸಮಾಜದ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು.

Advertisement

ಬಂಜಾರಾ (ಲಂಬಾಣಿ) ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಂತ ಸೇವಾಲಾಲರ ಜಯಂತಿಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರರು ಸಂವಿಧಾನದ ಮೂಲಕ ನೀಡಿದ ಪಜಾ ಮೀಸಲಾತಿಯಿಂದ ಲಂಬಾಣಿ ಜನಾಂಗದ ಮಕ್ಕಳು ಅಕ್ಷರವಂತರಾಗುತ್ತಿದ್ದಾರೆ. ಸಂವಿಧಾನ ಕೊಟ್ಟ ಈ ಋಣ ಮರೆಯುವಂತಿಲ್ಲ. ಕೆಲವರು ಸಂವಿಧಾನ
ತಿದ್ದುಪಡಿ ಮಾಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದಾರೆ. ಇದು ಸರಿಯಲ್ಲ. ಸಂವಿಧಾನ ತಿದ್ದಲು ಮುಂದಾದರೆ ಅದನ್ನು ಮೊದಲು ನಾವು ವಿರೋಧಿ ಸುತ್ತೇವೆ ಎಂದರು.

ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ ಕಾರ್ಯಕ್ರಮ ಉದ್ಘಾಟಿಸಿದರು. ಬಳಿರಾಮ ಮಹಾರಾಜ, ಸೋಮಶೇಖರ ಸ್ವಾಮೀಜಿ ಹಾಗೂ ಅಬುತುರಾಬ ಶಹಾ ಖಾದ್ರಿ ಆಶೀರ್ವಚನ ನೀಡಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಜಿಪಂ ಸದಸ್ಯರಾದ ಅಶೋಕ ಸಗರ, ಸೋನಿಬಾಯಿ, ಪುರಸಭೆ ಸದಸ್ಯೆ ಶೋಭಾ ಪವಾರ, ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಿವರಾಮ ಪವಾರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗಣೇಶ ಚವ್ಹಾಣ, ಮುಖಂಡರಾದ ನೀಲಯ್ಯಸ್ವಾಮಿ ಮಠಪತಿ, ಸಿದ್ದಣ್ಣ ಕಲಶೆಟ್ಟಿ, ರಮೇಶ ಕಾರಬಾರಿ, ಮುಕುºಲ ಜಾನಿ, ಡಾ| ಗೋವಿಂದ ನಾಯಕ, ಅರುಣ ಡಿಗಂಬರ ಚವ್ಹಾಣ, ರಾಮಚಂದ್ರ ರಾಠೊಡ, ಡಾ| ರಾಮು ಪವಾರ, ವಾಲ್ಮೀಕ ರಾಠೊಡ, ಮೋಹನ ಕಾರಬಾರಿ, ಬಾಳು ಚವ್ಹಾಣ ಇದ್ದರು. ಮಾನಸಿಂಗ ಚವ್ಹಾಣ ಸ್ವಾಗತಿಸಿದರು. ದೇವಜಿನಾಯಕ ರಾಠೊಡ ನಿರೂಪಿಸಿದರು. ರವಿ ಆರ್‌.ಬಿ. ಚವ್ಹಾಣ ವಂದಿಸಿದರು.

ನಾಳೆ ಸೇವಾಲಾಲ ಜಯಂತಿ 
ಆಳಂದ: ಪಟ್ಟಣದ ನಾಯಕ ನಗರದಲ್ಲಿ ಫೆ.17ರಂದು ಸಂತ ಸೇವಾಲಾಲ ಜಯಂತಿ ಪ್ರಯುಕ್ತ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ.
ಅಂದು ಬೆಳಗಿನ ಜಾವ ಸೇವಾಲಾಲ ಮಹಾರಾಜರ ಮೂರ್ತಿಗೆ ವಿಶೇಷ ಪೂಜೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಡಾ| ರಾಮರಾವ್‌ ಮಹಾರಾಜರ ಸದ್ಭಕ್ತರೊಂದಿಗೆ ಬೈಕ್‌ ರ್ಯಾಲಿ, ಸೇವಾಲಾಲರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಬಂಜಾರ ಕ್ರಾಂತಿ ದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ಮುಖಂಡ ಸುಭಾಷ ಫೌಜಿ ಅವರು ತಿಳಿಸಿದ್ದಾರೆ.

ಸೇವಾಲಾಲರ ತತ್ವ ಅಳವಡಿಸಿಕೊಳ್ಳಿ: ರಾಠೊಡ ಅಫಜಲಪುರ: ಯಾವುದೇ ಮಹಾನ್‌ ಪುರುಷರ, ಸಾಧಕರ ಜಯಂತಿ ಆಚರಣೆಯ ಹಿಂದೆ ಒಳ್ಳೆಯ ಉದ್ದೇಶವಿರುತ್ತದೆ. ಪ್ರತಿಯೊಬ್ಬರೂ ಕೂಡ ಮಾನವ ಸಮುದಾಯಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ.
ಸೇವಾಲಾಲ್‌ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನ್ಮಾರ್ಗದಲ್ಲಿ ನಡೆಯಬಹುದಾಗಿದೆ ಎಂದು ಬಂಜಾರಾ ರಕ್ಷಣಾ
ವೇದಿಕೆಯ ರಾಜ್ಯಾಧ್ಯಕ್ಷ ಅಪ್ಪು ರಾಠೊಡ ಹೇಳಿದರು.

Advertisement

ಪಟ್ಟಣದ ತಹಶೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ
ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸೇವಾಲಾಲ್‌ ಸಂತರು ಜನರಿಗೆ ಸರಳ ಮತ್ತು ಸನ್ಮಾರ್ಗದ ಸಂದೇಶಗಳನ್ನು ಸಾರಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಸರ್ಕಾರದ ವತಿಯಿಂದ ಸೇವಾಲಾಲ್‌ ಜಯಂತಿ ಆಚರಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಶ್ಲಾಘನೆ ಸಲ್ಲಿಸಿದರು.

ಇದೇ ತಿಂಗಳ 26ರಂದು ಪಟ್ಟಣದ ನ್ಯಾಷನಲ್‌ ಫಂಕ್ಷನ್‌ ಹಾಲ್‌ನಲ್ಲಿ ಸಮಾಜದ ಜಾಗೃತಿ ಸಮಾವೇಶ ಹಾಗೂ ಸೇವಾಲಾಲ್‌
ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಇಸ್ಮಾಯಿಲ್‌ ಮುಲ್ಕಿ ಮಾತನಾಡಿ, ಸೇವಾಲಾಲ್‌ ಸಿದ್ಧಾಂತಗಳು
ಸರಳವಾಗಿವೆ. ಎಲ್ಲರನ್ನು ಪ್ರೀತಿಸಿ, ಎಲ್ಲರನ್ನೂ ಗೌರವಿಸಬೇಕು. ಅವರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಬಿಇಒ ವಸಂತ ರಾಠೊಡ ಮಾತನಾಡಿದರು. ಬಂಜಾರಾ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮನೋಹರ್‌ ರಾಠೊಡ, ಜಿಲ್ಲಾಧ್ಯಕ್ಷ ನಾಥುರಾಮ್‌ರಾಠೊಡ, ತಾಲೂಕು ಅಧ್ಯಕ್ಷ ತಾರಾಸಿಂಗ ರಾಠೊಡ, ಪುರಸಭೆ ಸದಸ್ಯ ವಿನೋದ ರಾಠೊಡ ಮಾತನಾಡಿದರು.
ಈ ಸಂದರ್ಭದಲ್ಲಿ ಶಂಕರ ಪೂಜಾರಿ, ಮುಖಂಡರಾದ ಆನಂದ ರಾಠೊಡ, ಪುನ್ನು  ಪವಾರ, ರಾಜು ಚವ್ಹಾಣ, ಶ್ರೀಧರ ರಾಠೊಡ, ಮಾಂತು ರಾಠೊಡ, ರಾಜು ಚವ್ಹಾಣ, ಸುರ್ಯಭಾಯ್‌ ಎಸ್‌. ರಾಠೊಡ, ಅಧಿ ಕಾರಿಗಳಾದ ವಿಠ್ಠಲ್‌ ಹಾದಿಮನಿ, ಎಸ್‌.ಎನ್‌
ಗಿಣ್ಣಿ, ಸರಳಾ ದೊಡ್ಮನಿ, ಶರಣಗೌಡ ಪಾಟೀಲ್‌, ಎಸ್‌.ಬಿ. ವಾಲಿಕಾರ, ಸತೀಶಕುಮಾರ ಸೇರಿದಂತೆ ಇತರರು ಇದ್ದರು

ಬಿಜೆಪಿ ಕಚೇರಿಯಲ್ಲಿ ಸೇವಾಲಾಲ ಜಯಂತಿ
ಜೇವರ್ಗಿ: ಪಟ್ಟಣದ ಶಾಸ್ತ್ರೀ ಚೌಕ್‌ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂತ ಸೇವಾಲಾಲರ ಜಯಂತಿ ಆಚರಣೆ ಮಾಡಲಾಯಿತು. ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಬಸವರಾಜ ಪಾಟೀಲ ಅವರು ನರಿಬೋಳ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಮೇಶಬಾಬು ವಕೀಲ, ಬಿಜೆಪಿ ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ಅಂಬರೀಶ
ರಾಠೊಡ, ತಿಪ್ಪಣ್ಣ ರಾಠೊಡ, ಶ್ರೀಶೈಲಗೌಡ ಕರಕಿಹಳ್ಳಿ, ಅಕºರ್‌ಸಾಬ ಮುಲ್ಲಾ, ಶಿವು ಪಡಶೆಟ್ಟಿ, ರಿಜ್ವಾನ ಪಟೇಲ, ಸಾಯಬಣ್ಣ ಗುತ್ತೇದಾರ, ಗುರುರಾಜ ಸೂಲಹಳ್ಳಿ, ಮಹಾಂತೇಶ ಪವಾರ, ರುಕುಂ ಪಟೇಲ, ಬಸವರಾಜ ಮಡಿವಾಳಕರ್‌ ಇದ್ದರು.

ಅಭಿವೃದ್ಧಿಯತ್ತ ಲಂಬಾಣಿ ತಾಂಡಾ: ಜಾಧವ್‌
ಚಿಂಚೋಳಿ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಹೊಸದಾಗಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಹೊಸ ಕಾನೂನು ಜಾರಿಗೆ ತಂದಿರುವುದರಿಂದ ಇಂದು ಲಂಬಾಣಿ ತಾಂಡಾಗಳು ಅಭಿವೃದ್ಧಿಯತ್ತ ಸಾಗುತ್ತಿವೆ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಹೇಳಿದರು. ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂತ ಸೇವಾಲಾಲರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 118 ತಾಂಡಾಗಳಿದ್ದು, ಕೇವಲ 18 ತಾಂಡಾಗಳಿಗೆ ಮಾತ್ರ ರಸ್ತೆ ಸಂಪರ್ಕವಿತ್ತು. ಆದರೆ ಕಾಂಗ್ರೆಸ್‌ ಸರಕಾರದಿಂದ 97 ತಾಂಡಾಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸಿಕೊಡಲಾಗಿದೆ. ಇನ್ನು 6 ತಾಂಡಾಗಳಿಗೆ ರಸ್ತೆ ಸಂಪರ್ಕ ಮಾಡಬೇಕಾಗಿದೆ ಎಂದು ಹೇಳಿದರು.
ರಾಮಶೆಟ್ಟಿ ರಾಠೊಡ ಸಂತ ಸೇವಾಲಾಲ್‌ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತಾಲೂಕು ಬಂಜಾರ ಸಮಾಜ ಅಧ್ಯಕ್ಷ ರಾಮಶೆಟ್ಟಿ ಪವಾರ ಮಾತನಾಡಿದರು. ರೇಣುಕಾ ಚವ್ಹಾಣ, ಇಂದುಮತಿ ದೇಗಲಮಡಿ, ಗೌತಮ್‌ ಪಾಟೀಲ್‌, ಪಂಡಿತ ಬೀರಾದಾರ, ಶಿವಾಜಿ ಡೋಣಿ, ಗೋಪಾಲರಾವ ಕಟ್ಟಿಮನಿ, ಲಕ್ಷŒಣ ಆವಂಟಿ, ಮಲಕಪ್ಪ ಬೀರಾಪೂರ, ಜರ್ನಾಧನ ಎಂಪಳ್ಳಿ, ಮಧುಸೂಧನರೆಡ್ಡಿ ಕಲ್ಲೂರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next