ಚಿಂಚೋಳಿ: ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ 280ನೇ ಜಯಂತಿ ಆಚರಿಸಲಾಯಿತು.
ಶಾಸಕ ಡಾ| ಉಮೇಶ ಜಾಧವ್ ಶ್ರೀ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಹಶೀಲ್ದಾರ್ ಪಂಡಿತ ಬಿರಾದಾರ, ಡಿವೈಎಸ್ಪಿ ಅಕ್ಷಯ ಹಾಕೆ, ಸಿಪಿಐ ಎಚ್.ಎಂ. ಇಂಗಳೇಶ್ವರ, ಮುಖ್ಯಾಧಿಕಾರಿ ಗುರುಲಿಂಗಪ್ಪ, ಇಒ ಮೈನೋದ್ದೀನ ಪಟಲಿಕರ, ತಾಲೂಕು ಬಂಜಾರಾ ಸಮಾಜ ಅಧ್ಯಕ್ಷ ರಾಮಶೆಟ್ಟಿ ಪವಾರ, ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಮೇಘರಾಜ ರಾಠೊಡ, ಬಂಜಾರ ಸಮಾಜದ ಯುವ ಮುಖಂಡರಾದ ಚಂದ್ರಶೆಟ್ಟಿ ಜಾಧವ್, ಡಿ.ಕೆ.ಚವ್ಹಾಣ, ವಿಜಯಕುಮಾರ ರಾಠೊಡ, ಗೋವಿಂದ ರಾಠೊಡ, ಪ್ರೇಮಸಿಂಗ ಜಾಧವ್ ಹಾಗೂ
ಮತ್ತಿತರರು ಇದ್ದರು.
ಶ್ರದ್ಧಾಂಜಲಿ: ಕಾರ್ಯಕ್ರಮದ ನಂತರ ಚಿಂಚೋಳಿ-ಬೀದರ ರಾಜ್ಯ ಹೆದ್ದಾರಿಯಲ್ಲಿ ಉಗ್ರರ ದಾಳಿಯಲ್ಲಿ ಹುತ್ಮಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಂದಾಪುರ ಮಿನಿ ವಿಧಾನಸೌಧ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಉಗ್ರರ ದಾಳಿಯನ್ನು ಖಂಡಿಸಲಾಯಿತು. ಕೆ.ಎಂ. ಬಾರಿ, ಗೋಪಾಲರಾವ್ ಕಟ್ಟಿಮನಿ, ಲಕ್ಷ್ಮಣ ಆವಂಟಿ, ಸಂತೋಷ ಗಡಂತಿ, ಪುರಸಭೆ ಸದಸ್ಯರು, ತಾಪಂ ಸದಸ್ಯರು ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಸೈನಿಕರಿಗೆ ರಕ್ಷಣೆ ಅಗತ್ಯ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ತೀವ್ರ ಖಂಡನೀಯ. ಭಯೋತ್ಪಾದಕರ ಆತ್ಮಾಹುತಿ ದಾಳಿಯಿಂದಾಗಿ 43 ಯೋಧರು ವೀರ ಮರಣವನ್ನಪ್ಪಿದ್ದಾರೆ. ಇದರಿಂದಾಗಿ ಈ ಸೈನಿಕರ ಪತ್ನಿ, ಮಕ್ಕಳು ಅನಾಥರಾಗಿದ್ದಾರೆ. ಹೀಗಾಗಿ ದೇಶಕ್ಕೆ ತುಂಬಾ ನೋವಾಗಿದೆ. ಇದನ್ನು ಜಾತಿ, ಬೇಧ ಮತ್ತು ಪಕ್ಷ ಮರೆತು ತೀವ್ರವಾಗಿ ಖಂಡಿಸುತ್ತೇನೆ. ಮುಂದೆ ಇಂತಹ ಘಟನೆ ಆಗದಂತೆ ದೇಶದ ಸೈನಿಕರಿಗೆ ರಕ್ಷಣೆ ನೀಡಬೇಕಾಗಿದೆ. ದೇಶದಲ್ಲಿ ಉಗ್ರರ ಹಾವಳಿಯನ್ನು ಹತ್ತಿಕ್ಕಬೇಕಾಗಿದೆ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಆತ್ಮಾಹುತಿ ದಾಳಿ ನಡೆದಿರುವುದನ್ನು ಅನೇಕ ದೇಶಗಳು ಖಂಡಿಸಿವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರರಿಗೆ ಹೃದಯ ಪೂರ್ವಕ ನಮನ ಸಲ್ಲಿಸೋಣ.
ಡಾ| ಉಮೇಶ ಜಾಧವ್, ಶಾಸಕ