Advertisement

ಗುರಿ ಸಾಧನೆಗೆ ಗುರುವಿನ ಕೃಪೆ ಇರಲಿ: ವಿ. ಟಿ. ಮುಳಗುಂದ

06:29 PM Dec 08, 2020 | Suhan S |

ಡೊಂಬಿವಲಿ, ಡಿ. 7: ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಆರಾಧ್ಯ ದೇವರಾದ ಮಹಾನ್‌ ತಪಸ್ವಿ ಶ್ರೀ ಚಿದಂಬರ ಮಹಾಸ್ವಾಮಿಗಳ ಜಯಂತ್ಯುತ್ಸವ ಡಿ. 8 ರಂದು ಡೊಂಬಿವಲಿ ಪಶ್ಚಿಮದ ಕೋಪರ್‌ರಸ್ತೆಯ ಶ್ರೀ ಚಿದಂಬರ ಮಹಾಸ್ವಾಮಿ ಹಾಗೂ ಶ್ರೀ ಬನಶಂಕರಿ ದೇವಿಯ ಮಂದಿರದಲ್ಲಿ ನಡೆಯಿತು.

Advertisement

ವೇ| ಮೂ| ಪಂಡಿತ್‌ ವೆಂಕಟೇಶ್‌ ಜೋಶಿ ಅವರ ವೇದ-ಘೋಷಗಳ ಮಧ್ಯೆ ನವವಿವಾ ಹಿತರಾದ ಯಾದವ ಮತ್ತು ಆಶಾ ಕಂಕನವಾಡಿ ದಂಪತಿ ವಿಶೇಷ ಪೂಜೆ ಸಲ್ಲಿಸುವ ಮು ಖಾಂತರ ಸಂಭ್ರಮ ಹಾಗೂ ಭಕ್ತಿಭಾವದಿಂದ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಶ್ರೀ ಚಿದಂಬರ ಮಹಾಸ್ವಾಮಿಗಳ ಜಯಂ ತ್ಯುತ್ಸವ ನಿಮಿತ್ತ ಮಂದಿರದಲ್ಲಿ ಕಾಕಡಾರತಿ, ಅಭಿಷೇಕ, ಕ್ಷೀರಾಭೀಷೇಕ, ನಂದಾದೀಪ ಪ್ರತಿ ಷ್ಠಾಪನೆ ಹಾಗೂ ತೊಟ್ಟಿಲೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಜರಗಿತು. ಮಹಿಳಾ ವಿಭಾಗದ ಭಜನೆ ಹಾಗೂ ಯುವಕ, ಯುವತಿಯರ ನೃತ್ಯ ಗಮನ ಸೆಳೆಯಿತು. ಮಹಾಮಂಗಳಾರತಿಯ ಬಳಿಕ ಭಕ್ತವೃಂದ ಮಹಾಪ್ರಸಾದ ಸ್ವೀಕರಿಸಿ ಪುನೀತರಾದರು.

ಮಂಡಳದ ನಿಕಟಪೂರ್ವ ಅಧ್ಯಕ್ಷರೂ  ಹಾಗೂ ಮಂಡಳದ ಸಂಸ್ಥಾಪಕರಲ್ಲಿ ಒಬ್ಬರಾದ ವಿ. ಟಿ. ಮುಳಗುಂದ ಮಾತನಾಡಿ, ನಾವು ಮಾಡುವ ಯಾವುದೇ ಕಾರ್ಯ ಭಕ್ತಿ, ಶೃದ್ಧೆಯಿಂದ ಕೂಡಿರಬೇಕು. ಗುರುಗಳ ಆಶೀರ್ವಾದ ಇದ್ದರೆ ಯಶಸ್ಸು ನಿಶ್ಚಿತ. ಪ್ರತಿಯೊಬ್ಬರ ಜೀವನದಲ್ಲಿ ಗುರಿ ಇರಬೇಕು. ಹಾಗೂ ಗುರಿ ಸಾಧಿಸಲು ಗುರುವಿನ ಕೃಪೆ ಇರಬೇಕು ಎಂದು ಹೇಳಿದ ಅವರು, ಡೊಂಬಿವಲಿ ಮಹಾನಗರದದಲ್ಲಿ ಕಳೆದ ಆರುವರೆ ದಶಕಗಳಿಂದ ಶ್ರೀ ಚಿದಂಬರ ಸ್ವಾಮಿ ಸೇವಾ ಮಂಡಳವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಶ್ರೀ ಚಿದಂಬರ ಮಹಾಸ್ವಾಮಿ ಹಾಗೂ ತಾಯಿ ಶ್ರೀ ಬನಶಂಕರಿ ದೇವಿಯ ದೇವಸ್ಥಾನ ಹೊಂದಿದ್ದು, ಮಂಡಳದ ಬಹುದಿನಗಳ ಕನಸಾದ ಭವ್ಯ ಕಲ್ಯಾಣ ಮಂಟಪ ನಿರ್ಮಾಣದ ಕಾರ್ಯಭರದಿಂದ ಸಾಗಿದೆ. ಭಕ್ತರ ಸಹಾಯ ಸಹಕಾರ ಹಾಗೂ ಸ್ವಾಮಿಗಳ ಆಶೀರ್ವಾದದಿಂದ ಶೀಘ್ರವೇ ಇದು ಪೂರ್ಣಗಳ್ಳಲ್ಲಿದ್ದು, ಸದ್ಭಕ್ತರು ಸಹಕರಿಸಬೇಕು ಎಂದರು.

ಉತ್ಸವದಲ್ಲಿ ಮಂಡಳದ ನೂತನ ಪದಾಧಿಕಾರಿಗಳಾದ ಶ್ರೀಧರ ಅಕ್ಕಿವಲ್ಲಿ, ಪ್ರಕಾಶ ಜೋಶಿ, ಕಿರಣ ಕುಲಕರ್ಣಿ, ಸತೀಶ ಕುಲಕರ್ಣಿ, ನಂದಕುಮಾರ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ವಿಟuಲ್‌ ಸಂಗಮ, ಅಚ್ಯುತ್‌ ಕುಲಕರ್ಣಿ, ಹಿರಿಯರಾದ ವಿ. ಟಿ. ಮುಳಗುಂದ ಹಾಗೂ ಬಿ. ಎಂ. ಪಾಟೀಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

 

-ಚಿತ್ರ-ವರದಿ: ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next