Advertisement

ಮತ್ತೆ ಮತ್ತೆ ಸೇವಂತಿ

06:15 AM Apr 22, 2018 | |

ಇಂದು ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ ಮತ್ತು ಇತಿ ನಿನ್ನ ಅಮೃತಾ ನಾಟಕಗುತ್ಛದ ಪುಸ್ತಕ ಬಿಡುಗಡೆಗೊಳ್ಳಲಿದೆ.

Advertisement

ನಾವು ನೋಡಿದ ಅಥವಾ ಅಭಿನಯಿಸಿದ ನಾಟಕದ ಪುಸ್ತಕವನ್ನು ಬಹಳ ದಿನಗಳ ನಂತರ ಓದಲು ತೆಗೆದರೆ, ಎಷ್ಟೊಂದು ನೆನಪುಗಳು ತೆರೆದುಕೊಳ್ಳುತ್ತವೆ ! ಸೇವಂತಿ ಪ್ರಸಂಗ ಅಥವಾ ಹೂ ಹುಡುಗಿ ನಾಟಕವನ್ನು “ಚಂದನ’ ವಾಹಿನಿಯಲ್ಲಿ ನೋಡಿದಾಗ, ಈ ನಾಟಕವನ್ನು ರಂಗದ ಮೇಲೆ ನೇರವಾಗಿ ನೋಡಿದ್ದಿದ್ದರೆ ಎಂದು ಕಲ್ಪಿಸಿಕೊಳ್ಳುವುದರಲ್ಲಿಯೇ ರೋಮಾಂಚ®ವಿರುತ್ತಿತ್ತು. ಕೆಲವು ವರ್ಷಗಳ ನಂತರ ನಮ್ಮ ಊರಿನವರೇ ಆದ ಚಂದ್ರಶೇಖರ ಹೆಗ್ಗೊàಠಾರ ಅವರು ನಮ್ಮ “ಶಾಂತಲಾ ಕಲಾವಿದರು’ ಹವ್ಯಾಸಿ ತಂಡಕ್ಕೆ ಈ ನಾಟಕವನ್ನು ನಿರ್ದೇಶಿಸಲು ಆಯ್ಕೆ ಮಾಡಿಕೊಂಡಾಗ ಇದೇ ಎಪ್ರಿಲ್‌ನ ಧಗೆಯಿದ್ದರೂ ಮನಸ್ಸಿಗೆ ಎಲ್ಲಿಲ್ಲದ ಉತ್ಸಾಹ. ನನಗೆ ಸೇವಂತಿ ಪಾತ್ರ ಸಿಗುತ್ತದೆ ಎನ್ನುವ ಉಮೇದಿನಲ್ಲಿ ತಾಲೀಮಿಗೆ ಹೋಗುತ್ತಿದ್ದೆ. ಪಾತ್ರ ಹಂಚುವ ದಿನ ನಮ್ಮ ತಂಡದ ಮೈತ್ರಿಗೆ ಸೇವಂತಿ ಪಾತ್ರ ಸಿಕ್ಕಿತು! ಇರಲಿ, ಪಾತ್ರ ಸಿಗದಿದ್ದರೇನು ಫ್ಯಾಷನ್‌ ಶೋ ಇದೆಯಲ್ಲ ಎಂದು ಸಮಾಧಾನಪಟ್ಟುಕೊಂಡದ್ದಾಯಿತು.

ನಾಟಕದೊಳಗೆ ನಡೆಯುವ ಫ್ಯಾಷನ್‌ ಶೋ ದೃಶ್ಯಕ್ಕೆ, ನಿಜವಾದ ಫ್ಯಾಷನ್‌ ಶೋ ನಡೆಸುವವರಷ್ಟೇ ತಲೆಕೆಡಿಸಿಕೊಂಡು ವಿನ್ಯಾಸ ಮಾಡಿದ್ದು, ತಿಪ್ಪೇಕ್ರಾಸ್‌ನ ಕಸದ ತೊಟ್ಟಿಗೆ ಎಲ್ಲರೂ ಸೇರಿ ಬಣ್ಣ ಬಳಿದದ್ದು,  ಉಳಿದವರು ಅದ್ಭುತವಾದ ಹಾಡುಗಳಿಗೆ ನೃತ್ಯ ಮಾಡುವಾಗ, “ನಮಗೆ ಒಂದು ಸೀನ್‌ನಲ್ಲಾದರೂ ಇಂತಹದ್ದೊಂದು ಡ್ಯಾನ್ಸ್‌ ಇರಬೇಕಿತ್ತು’ ಎಂದು ಹೊಟ್ಟೆ ಉರಿದುಕೊಂಡದ್ದು… ಪ್ರದರ್ಶನದ ಹಿಂದಿನ ದಿನ ಇನ್ನೆರಡು ದಿನ ಮಳೆ ಬಾರದೆ ಇರಲಿ ಎಂದು ಮನಸ್ಸಿನಲ್ಲೇ ದೇವರಿಗೆ ಕೈ ಮುಗಿದದ್ದು, ಪ್ರದರ್ಶನ ಮುಗಿದಾಗ ಪ್ರೇಕ್ಷಕರ ಕರತಾಡನದಲ್ಲಿ ಕೊಚ್ಚಿಹೋಗಿದ್ದು… ಇವೆಲ್ಲ ಕೇವಲ ಸಣ್ಣ ವಯಸ್ಸಿನಲ್ಲಿ ನಾಟಕ ಮಾಡಿದ ಅನುಭವ ಮಾತ್ರವಲ್ಲ, ಬದಲಾಗಿ ಬದುಕಿನುದ್ದಕ್ಕೂ ಜೀವಂತವಾಗಿಡಬಲ್ಲ ನೆನಪಿನ ಗುತ್ಛಗಳು.

ಇದಾದ 15 ವರ್ಷಗಳ ಬಳಿಕ ಮೈಸೂರಿನಲ್ಲಿ “ಸೇವಂತಿಯ’ ಮತ್ತೂಂದು ಪ್ರದರ್ಶನ ನಡೆಯಿತು. ನಾಟಕ ಮುಗಿದ ಮೇಲೆ ನಮ್ಮೂರಿನವರೊಬ್ಬರು, “ನೀವು ಮಾಡಿದ ಪ್ರದರ್ಶನವೇ ಚೆನ್ನಾಗಿತ್ತು’ ಎಂದು ಹೇಳಿದಾಗ ಹೆಮ್ಮೆ ಪಡಬೇಕೋ ಅಥವಾ ಇಷ್ಟದ ನಾಟಕದ ಪ್ರದರ್ಶನ ಹೀಗಾಯಿತಲ್ಲಾ ಎಂದು ಬೇಸರ ಪಡಬೇಕೋ ತಿಳಿಯಲಿಲ್ಲ ನೀನಾಸಮ್‌ ತಿರುಗಾಟಕ್ಕೆ ಇದನ್ನು ನಿರ್ದೇಶಿಸಿದ ಅತುಲ್‌ ತಿವಾರಿಯವರು ಜಯಂತರ ಬರವಣಿಗೆಯ ಬಗ್ಗೆ ಹೀಗೆ ಹೇಳಿದ್ದರು:Jayant’s writings prick you with flowers and tickle with thorns.

ನಾಟಕದ ಕತೆ ಬರ್ನಾಡ್‌ ಷಾರದ್ದಾಗಿದ್ದರೂ ಪಾತ್ರಗಳ ಆತ್ಮ ಜಯಂತ ಕಾಯ್ಕಿಣಿಯವರದ್ದೇ. ಇಲ್ಲಿಯೂ ಮತ್ತೆ ಅವರನ್ನು ಕಾಡುವುದು ಮುಂಬೈನ ಮಳೆಗಾಲದಲ್ಲಿ ಬೂಟ್‌ಪಾಲಿಶ್‌ ಡಬ್ಬಿಗಳನ್ನು ಸುರಕ್ಷಿತವಾಗಿಟ್ಟು ಕೊಡೆ ಹೊಲಿಯುತ್ತ‌ ಪಾಠ ಕಲಿಯುವ ಬೀದಿ ಮಕ್ಕಳು, ಬೆಚ್ಚಗಿನ ಒಲೆಯಲ್ಲಿ “ಭಗ್‌’ ಎಂದು ಹೊತ್ತಿಕೊಳ್ಳುವ ನೀಲಿ ಹೂ.

Advertisement

ಇಲ್ಲಿಯವರೆಗೆ ಬೇರೆ ಬೇರೆ ತಂಡದವರು ಅಭಿನಯಿಸಿದ ಐದು ಪ್ರದರ್ಶನಗಳನ್ನು ನೋಡಿದ್ದೇನೆ. ಎಷ್ಟೊಂದು ಸೇವಂತಿಯರು, ಎಷ್ಟೊಂದು ತಿಪ್ಪೆ$ಕ್ರಾಸ್‌, ಟಕ್‌ಟಕ್‌ ಟಗಡಕ್‌ ರೇಸ್‌ಕೋರ್ಸ್‌ಗಳು.ಪುಸ್ತಕ ಮತ್ತೆ ಮತ್ತೆ ಮುದ್ರಣಗೊಳ್ಳುವಂತೆ ಹೊಸ ಹೊಸ ಸೇವಂತಿಯರು ರಂಗದ ಮೇಲೆ ಬರುತ್ತಿರಲಿ.

ಸಮುದ್ರ, ನದಿ ಅಥವಾ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿಯುವವರು ತಮ್ಮ ಬಟ್ಟೆ ಚಪ್ಪಲಿ ವಾಚು, ಕನ್ನಡಕ ಪೆನ್ನು , ಪಾಕೀಟು ಇತ್ಯಾದಿಗಳನ್ನು ತೀರದಲ್ಲೆ, ಆಚೆ ಈಚೆ ನೋಡಿ ಇಟ್ಟು ಹೋಗಿರುತ್ತಾರೆ. ವ್ಯಕ್ತಿಯ ಖಾಸಾ ಲಕ್ಷಣಗಳನ್ನೆಲ್ಲ ಆತ್ಮಗತ ಮಾಡಿಕೊಂಡಿರುವ ಆ ವಸ್ತುಗಳ ಪುಟ್ಟ ಗುತ್ಛ , ಒಂದು ನಿರುಪದ್ರವಿ ಸ್ವಾತಂತ್ರ್ಯದಲ್ಲಿರುತ್ತದೆ, ವ್ಯಕ್ತಿಯ ಹಾಜರಿಯನ್ನೂ ಸಾರುವಂತಿರುತ್ತದೆ. ಒಂದು ಅಲಿಖೀತ ವಿಶ್ವಾಸ ಅಲ್ಲಿರುತ್ತದೆ. ಬರವಣಿಗೆಯ ವ್ಯವಸಾಯವೂ ಇಂಥದೊಂದು ವ್ಯಾಪಕ ಅನಾಮಿಕ ಕೌಟುಂಬಿಕತೆಯ ಅಲಿಖೀತ ವಿಶ್ವಾಸದಲ್ಲೇ  ನಡೆಯು ವಂಥದು.
– ಜಯಂತ ಕಾಯ್ಕಿಣಿ

Advertisement

Udayavani is now on Telegram. Click here to join our channel and stay updated with the latest news.

Next