ಮುಂಡಗೋಡ/ದಾಂಡೇಲಿ: ಅಕ್ಟೋಬರ್ 15 ರೊಳಗೆ ಲಿಂಗಾಯತ ಪಂಚಮಸಾಲಿ 2ಎ ಹಕ್ಕೊತ್ತಾಯವನ್ನು ಸರ್ಕಾರ ಈಡೇರಿಸದಿದ್ದರೆ ಮತ್ತೂಮ್ಮೆ ಬೆಂಗಳೂರಿನಲ್ಲಿ ವಿಶ್ವ ಲಿಂಗಾಯತ ಪಂಚಮಸಾಲಿ ಬೃಹತ ರ್ಯಾಲಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಮಹಾಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮಿ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಮೀಸಲಾತಿ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ನಡೆಸಿ ದೇಶದ ಗಮನ ಸೇಳೆದಿದ್ದೇವೆ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಧಿವೇಶನದಲ್ಲಿ ಮೀಸಲಾತಿಗಾಗಿ 6 ತಿಂಗಳ ಕಾಲಾವಕಾಶದೊಳಗೆ ಮಾಡುವುದಾಗಿ ಹೇಳಿದ್ದಾರೆ. ತಡ ಮಾಡದೆ ಮುಖ್ಯಮಂತ್ರಿಗಳಿಗೆ 2ಎ ಮೀಸಲಾತಿ ಕೊಡಲು ಪರಮಾಧಿಕಾರ ಇದೆ. ನಾಲ್ಕು ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಲಿಂಗಾಯತ ಪಂಚಮಸಾಲಿ ಸಮುದಾಯದ ಅಪಾರ ಕೊಡುಗೆ ಇದೆ. ಅವರು ಕೂಡ ಲಿಂಗಾಯತ ಪಂಚಮಸಾಲಿಯವರ ಖುಣ ನನ್ನ ಮೇಲೆ ಇದೆ ಎಂದು ಹೇಳಿದ್ದಾರೆ. ಆದ ಕಾರಣ ಆ ಸಮಾಜದ ಪರವಾಗಿ ನಾವು ಕೇಳುತ್ತಿದ್ದೇವೆ. ಇದು ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಮತ್ತು ಅವರ ಮುಂದಿನ ಭವಿಷ್ಯಕ್ಕಾಗಿ ಆಗಿದೆ ಎಂದರು.
ಈ ಹಿಂದೆ ಲಿಂಗಾಯತರು ಎಂದರೇ ಯಡಿಯೂರಪ್ಪ, ಶಾಮನೂರ ಶಿವಶಂಕ್ರಪ್ಪ, ಈಶ್ವರ ಖಂಡ್ರೆ, ಮುರುಗೇಶ ನಿರಾಣಿ ಹೀಗೆ ಇನ್ನಿತರ ನಾಯಕರು ಮಾತ್ರ ಎಂದು ತಿಳಿದಿದ್ದರು. ಆದ್ರೆ ಬೆಂಗಳೂರನಲ್ಲಿ ಮೀಸಲಾತಿ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ ನಂತರ ದೆಹಲಿ ನಾಯಕರಲ್ಲಿಯೂ ಲಿಂಗಾಯತ ಪಂಚಾಮಸಾಲಿ ಸಮಾಜದಲ್ಲಿ ಅನೇಕ ನಾಯಕರಿದ್ದಾರೆ. ಐದಾರು ನಾಯಕರನ್ನು ನೆಚ್ಚಿಕೊಂಡಿಲ್ಲ ಎಂದು ಅವರು ತಿಳಿದಿದ್ದಾರೆ ಎಂದರು.
ಈ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್‌ನ ಬಿ ಟೀಂ ಎಂದು ಸಚಿವ ನಿರಾಣಿಯವರು ಹೋರಾಟ ಮಾಡುವ ವೇಳೆ ಹೇಳಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಚಳವಳಿ ಪಕ್ಷಾತೀತವಾದದ್ದು ಹಾಗೂ ರೈತರ ಮಕ್ಕಳ ಚಳವಳಿಯಾಗಿದೆ. ಮುಂಚೂಣಿಯಲ್ಲಿರುವ ನಾಯಕರನ್ನು ಮತ್ತು ಹೊರಾಟ ಹತ್ತಿಕ್ಕಲು ಆಯಾ ಸರ್ಕಾರಗಳು ಸಮಾಜದ ಮುಖಂಡರುಗಳಿಂದ ಹೇಳಿಸುತ್ತಾರೆ ಎಂದು ಉತ್ತರಿಸಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ಮುಂಖಡರಾದ ರಾಮಣ್ಣಾ ಕುನ್ನೂರ, ಗುಡ್ಡಪ್ಪ ಕಾತೂರ, ಮಂಜುನಾಥ ಕಟಗಿ, ಮಲ್ಲಿಕಾರ್ಜುನ ಗೌಳಿ ಇತರರಿದ್ದರು. ದಾಂಡೇಲಿಯಲ್ಲಿ ವೀರಶೈವಾ ಸಮಾಜದ ಪ್ರಮುಖರಾದ ಅಶೋಕ ಪಾಟೀಲ, ಯು.ಎಸ್. ಪಾಟೀಲ, ಎಸ್.ಎಂ. ಪಾಟೀಲ, ಸೋಮಶೇಖರ ಬೆಣ್ಣೆ, ಎಸ್.ಎನ್. ಪಾಟೀಲ, ಸೋಮಶೇಖರ ಹಾಗೂ ರುದ್ರಪ್ಪಾ ಮುರುಗೋಡ, ಚೆನ್ನಬಸಪ್ಪ ಮುರುಗೋಡ, ರಾಹುಲ್ ಮುರುಗೋಡ, ನಟರಾಜ ಅಂಗಡಿ ಮೊದಲಾದವರು ಉಪಸ್ಥಿತರಿದ್ದರು.