Advertisement

Genie; ಜಯಂ ರವಿ ಜೊತೆಯಾದ ಕೃತಿ ಶೆಟ್ಟಿ

03:31 PM Jul 11, 2023 | Team Udayavani |

ಜಯಂ ರವಿ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ “ಜೀನಿ’ ಎಂದು ಟೈಟಲ್‌ ಇಡಲಾಗಿದೆ. ಡಾ.ಇಶಾರಿ.ಕೆ. ಗಣೇಶ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇತ್ತೀಚೆಗೆ ಚಿತ್ರ ಸೆಟ್ಟೇರಿದೆ.

Advertisement

ಯುವ ನಿರ್ದೇಶಕ ಅರ್ಜುನನ್‌ ಜೆ.ಆರ್‌ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್‌, ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಶ್‌ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜನೆ, ಪ್ರದೀಪ್‌ ಇ.ರಾಘವ್‌ ಸಂಕಲನ, ಯಾನಿಕ್‌ ಬೆನ್‌ ಸಾಹಸ ಈ ಚಿತ್ರಕ್ಕಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ “ಜೀನಿ’ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next