Advertisement

Jayalaxmi Silks: ಉಡುಪಿ ಬನ್ನಂಜೆಯಲ್ಲಿ ಜಯ ಲಕ್ಷ್ಮೀ ಸಿಲ್ಕ್ಸ್ ಮಳಿಗೆ ಉದ್ಘಾಟನೆ

10:09 AM Aug 25, 2023 | |

ಉಡುಪಿ: ರಾ.ಹೆ. 169ಎ ಸನಿಹದ ಬನ್ನಂಜೆಯಲ್ಲಿ ನಿರ್ಮಿಸಿರುವ ಸಮುಚ್ಚಯದಲ್ಲಿ ಜಯ ಲಕ್ಷ್ಮೀ ಸಿಲ್ಕ್ಸ್ ನ ಉದ್ಘಾಟನೆ ಗುರುವಾರ ನಡೆಯಿತು.

Advertisement

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂಡಿ ಮತ್ತು ಸಿಇಒ ಡಾ| ಮಹಾಬಲೇಶ್ವರ ಎಂ.ಎಸ್‌. ಉದ್ಘಾಟಿಸಿ ಮಾತನಾಡಿ, ಉಡುಪಿಯ ವರ್ಣಮಯ ಇತಿಹಾಸದೊಂದಿಗೆ ಹೆಸರಾಂತ ಜವುಳಿ ಮಳಿಗೆ ಜಯ ಲಕ್ಷ್ಮೀ ಸಿಲ್ಕ್ಸ್ ಸೇರಿಕೊಂಡು ಮತ್ತಷ್ಟು ಸುಂದರಗೊಳಿಸಿದೆ. ಉದ್ಯಮವೊಂದು ಯಶಸ್ವಿಗೊಂಡರೆ ಅದರೊಂದಿಗೆ ಊರು/ ನಗರ ಅಭಿವೃದ್ಧಿ ಹೊಂದು ತ್ತದೆ. ಈ ಉದ್ಯಮವು ಜಯ ಸಾಧಿಸಿ, ಲಕ್ಷ್ಮೀಯನ್ನು ಒಲಿಸಿಕೊಂಡು ಯಶಸ್ವಿ ಯಾಗಲಿ ಎಂದು ಹಾರೈಸಿದರು.

ಪ್ರಥಮ ಅಂತಸ್ತಿನ ಸೀರೆ ವಿಭಾಗವನ್ನು ಉದ್ಘಾಟಿಸಿದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ಸಿಬಂದಿಯ ನಗುಮೊಗದ ಸೇವೆಯೊಂದಿಗೆ ಉತ್ತಮ ಗುಣಮಟ್ಟದ ಬಟ್ಟೆಬರೆಗಳನ್ನು ಗ್ರಾಹಕರಿಗೆ ಒದಗಿಸಿದಾಗ ವಸ್ತ್ರೋದ್ಯಮ ಬೆಳವಣಿಗೆ ಕಾಣುತ್ತದೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

5ನೇ ಅಂತಸ್ತಿನ ಬ್ರ್ಯಾಂಡೆಡ್‌ ಮೆನ್ಸ್‌ ವೇರ್‌ ಉದ್ಘಾಟಿಸಿದ ಉದ್ಯಾವರ ಹಲೀಮಾ ಸಬ್ಜು ಆಡಿಟೋರಿಯಂನ ಹಾಜಿ ಅಬ್ದುಲ್‌ ಜಲೀಲ್‌ ಸಾಹೇಬ್‌, ನೆಲ ಅಂತಸ್ತಿನ ಹ್ಯಾಂಡ್‌ಲೂಮ್‌ ವಿಭಾಗ ಉದ್ಘಾಟಿಸಿದ ಮಾಂಡವಿ ಬಿಲ್ಡರ್ನ ಎಂಡಿ ಜೆರ್ರಿ ವಿನ್ಸೆಂಟ್‌ ಡಯಾಸ್‌, 4ನೇ ಅಂತಸ್ತಿನ ಎತ್ನಿಕ್‌ವೆàರ್‌ ವಿಭಾಗ ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್‌ನ ಜಿಎಂ ರವಿಚಂದ್ರನ್‌ ಶುಭಾಶಂಸನೆಗೈದರು.

Advertisement

3ನೇ ಅಂತಸ್ತಿನ ಲೈಫ್ಸ್ಟೈಲ್‌ ವಿಭಾಗವನ್ನು ಎಸ್‌.ಪಿ. ಹಾಕೆ ಅಕ್ಷಯ ಮಚ್ಚೀಂದ್ರ, ಎತ್ನಿಕ್‌ವೆàರ್‌, ಕಿಡ್ಸ್‌ ವಿಭಾಗವನ್ನು ಆನಂದ್‌ ಟ್ರಾವೆಲ್ಸ್‌ ನ ಮಾಲಕ ಎ.ಎಂ. ಡಿ’ಸೋಜಾ, ನಟರಾದ ದಯಾ ಶೆಟ್ಟಿ, ಹರೀಶ್‌, ಮೆನ್ಸ್‌ವೇರ್‌ ವಿವಿಧ ವಿಭಾಗವನ್ನು ಉದ್ಯಮಿ ವಾಸುದೇವ ಕಾಮತ್‌, ಲೆಕ್ಕಪರಿಶೋಧಕ ನವೀನ್‌ ನಾಯಕ್‌, ಗಾಗ್ರಾ ವಿಭಾಗವನ್ನು ನಟಿ ಅನ್ಶಾ ಉದ್ಘಾಟಿಸಿದರು.

ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಕಾಂಚನ್‌ ಹ್ಯುಂಡೈ ಮಾಲಕ ಪ್ರಸಾದ್‌ರಾಜ್‌ ಕಾಂಚನ್‌, ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಡೆ, ರವೀಂದ್ರ ಹೆಗ್ಡೆ, ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ, ಅಪರ್ಣಾ ರವೀಂದ್ರ ಹೆಗ್ಡೆ, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಶಾಲಿನಿ ಜಿ. ಶಂಕರ್‌ ಪ್ರಥಮ ಗ್ರಾಹಕಿಯಾಗಿ ರೇಷ್ಮೆ ಸೀರೆ ಖರೀದಿಸಿದರು. ಕರ್ಣಾಟಕ ಬ್ಯಾಂಕ್‌ ವತಿಯಿಂದ ಸಂಸ್ಥೆಯ ಮಾಲಕರನ್ನು ಗೌರವಿಸಲಾಯಿತು. ಅವಿನಾಶ್‌ ಕಾಮತ್‌ ನಿರೂಪಿಸಿ, ವಂದಿಸಿದರು.

ಟೆಕ್ಸ್‌ಟೈಲ್ಸ್‌ ವ್ಯವಹಾರದಲ್ಲಿ 2ನೇ ಸ್ಥಾನ
2ನೇ ಅಂತಸ್ತಿನ ದುಬಾರಿ ಬೆಲೆಯ ಸೀರೆ ವಿಭಾಗ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದೇಶದ ವಿಜ್ಞಾನಿಗಳು ಚಂದ್ರಲೋಕವನ್ನು ಅವಲೋಕಿಸುವ ಅವಕಾಶವನ್ನು ಒದಗಿಸಿಕೊಟ್ಟರೆ, ಜಯಲಕ್ಷ್ಮೀ ಸಿಲ್ಕ್ಸ್ ನವರು ಉಡುಪಿಯ ಜನತೆಗೆ ಟೆಕ್ಸ್‌ಟೈಲ್ಸ್‌ನ ಅವಲೋಕನ ಮಾಡಿಸಿದ್ದಾರೆ. ಕ್ವಾಲಿಟಿ, ಗ್ಯಾರಂಟಿ, ಸರ್ವಿಸ್‌ ಸಮರ್ಪಕವಾಗಿದ್ದರೆ ಉದ್ಯಮ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಟೆಕ್ಸ್‌ಟೈಲ್ಸ್‌ ವ್ಯವಹಾರದಲ್ಲಿ 2ನೇ ಸ್ಥಾನ ಗಳಿಸಿದ ಸಂಸ್ಥೆ ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸಲಿ. ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next