Advertisement

ಜಯಲಲಿತಾ ಸಹೋದರ ಪುತ್ರಿ ದೀಪಾ ಜಯಕುಮಾರ್‌ ರಾಜಕೀಯಕ್ಕೆ

12:05 PM Jan 17, 2017 | Team Udayavani |

ಚೆನ್ನೈ : ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಏಕೈಕ ಸಹೋದರ, ದಿ. ಜಯಕುಮಾರ್‌ ಪುತ್ರಿ, 42ರ ಹರೆಯದ ದೀಪಾ ಜಯಕುಮಾರ್‌ ರಾಜಕೀಯ ರಂಗಪ್ರವೇಶ ಮಾಡಿದ್ದಾರೆ. ಎಐಎಡಿಎಂಕೆ ಕಾರ್ಯಕರ್ತರ ಆಶೋತ್ತರಗಳನ್ನು ನೆರವೇರಿಸುವುದಕ್ಕೆ ತಾನು ಪರಿಶ್ರಮಿಸುವುದಾಗಿ ಆಕೆ ಹೇಳಿದ್ದಾರೆ.

Advertisement

ದೀಪಾ ಅವರ ರಾಜಕೀಯ ರಂಗಪ್ರವೇಶದೊಂದಿಗೆ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿಧನ ಹೊಂದಿ ತಿಂಗಳಾಗುತ್ತಲೇ ಈಗ ಆಕೆಯ ಬಳುವಳಿಗಾಗಿ ವಸ್ತುತಃ ಸಮರವೇ ಆರಂಭವಾದಂತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದೀಪಾ ಜಯಕುಮಾರ್‌ ಅವರು ತನ್ನ ರಾಜಕೀಯ ರಂಗ ಪ್ರವೇಶಕ್ಕೆ ಜನವರಿ 17ರ ತೇದಿಯನ್ನೇ ಆಯ್ಕೆ ಮಾಡಿರುವುದಕ್ಕೆ ಕಾರಣವಿದೆ. ಅಂದ ಹಾಗೆ ಜ.17 ಎಐಎಡಿಎಂಕೆ ಸ್ಥಾಪಕ ಎಂ ಜಿ ರಾಮಚಂದ್ರನ್‌ ಅವರ 100ನೇ ಹುಟ್ಟುಹಬ್ಬದ ದಿನವಾಗಿದೆ. ಮೇಲಾಗಿ ವಿ ಕೆ ಶಶಿಕಲಾ ಅವರು ಅಮ್ಮನ ಉತ್ತರಾಧಿಕಾರಿಯಾಗುವುದರ ವಿರುದ್ಧ ಹೋರಾಡುವುದು ದೀಪಾ ಅವರ ಉದ್ದೇಶವಾಗಿರುವುದು ಸ್ಪಷ್ಟವಿದೆ ಎನ್ನಲಾಗಿದೆ. 

ದೀಪಾ ಅವರಿಂದು ತನ್ನ ನೂರಾರು ಬೆಂಬಲಿಗರೊಂದಿಗೆ ಮರೀನಾ ಬೀಚ್‌ನಲ್ಲಿರುವ ಎಂಜಿಆರ್‌ ಮತ್ತು ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅಲ್ಲಿ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. ದೀಪಾ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next