Advertisement
ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಭಾನುವಾರ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮೂರನೇ ದಿನದ ಸಹಜ ಶಿವಯೋಗದ ಸಾನ್ನಿಧ್ಯವಹಿಸಿ ಮಾತನಾಡಿದರು.
Related Articles
Advertisement
ಶರಣ ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಬದುಕನ್ನು ಉದಾತ್ತಗೊಳಿಸುವುದು, ಪರಿಶ್ರಮಿಸುವುದು, ಸಂಸ್ಕಾರಗೊಳಿಸುವುದು, ಗೌರವಿಸುವುದು, ಒಗ್ಗೂಡಿಸುವುದು, ಕಟ್ಟುವುದು, ಸಮಾನತೆಯನ್ನು ತರುವುದು ಎಂದೆಲ್ಲಾ ಕರೆಯಲಾಗುತ್ತದೆ. ಈ ಶರಣ ಸಂಸ್ಕೃತಿ ಉತ್ಸವದ ಮೂಲಕ ಇಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುರುಘಾಮಠ ನಡೆದುಕೊಂಡು ಬರುತ್ತಿದೆ. ಜಾತ್ಯತೀತವಾಗಿ, ಸರ್ವರಿಗೂ ಸಮಾನತೆ, ಮಹಿಳಾ ಸ್ವಾತಂತ್ರ್ಯ ನೀಡುತ್ತಾ ಪ್ರತಿಯೊಬ್ಬರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಬಸವತತ್ವದ ಪ್ರಚಾರಕ್ಕೆ 12ನೇ ಶತಮಾನದ ನಂತರವೂ ಹಲವಾರು ಶರಣರು ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ. ಅಲ್ಲದೇ ತೋಂಟದ ಸಿದ್ದಲಿಂಗ ಶರಣರು, ನಂತರ ಮುರುಘೆಯ ಶ್ರೀ ಶಾಂತವೀರ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಇಲ್ಲಿನ ವಿಜಯ ಮಹಾಂತಸ್ವಾಮಿ, ನಾಗನೂರು, ಅಥಣಿ ಶ್ರೀಗಳು, ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಅವರ ಕೊಡುಗೆಯೂ ಅಪಾರವಾಗಿದೆ ಎಂದು ಸ್ಮರಿಸಿಕೊಂಡರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಶರಣೆ ಲಿಂಗದೇವಿ, ಧಾರವಾಡದ ಈಶ್ವರ ಸಾಣಿಕೊಪ್ಪ, ಹರಿಹರದ ಸುಬ್ರಮಣ್ಯ ನಾಡಿಗೇರ, ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ಪಟೇಲ್, 30ಕ್ಕೂ ಹೆಚ್ಚು ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.
ನಂತರ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಬಸವಕೇಂದ್ರದ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಕಾರ್ಯಕ್ರಮ ನಡೆಯಿತು.
ನೂತನ ಸ್ವಾಮೀಜಿ ನೇಮಕ ಸಂತಸ ತಂದಿದೆದಾವಣಗೆರೆ: ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ನೂತನ ಪೀಠಾಧಿಪತಿಗಳಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ನೇಮಕ ಸಮಾಜಕ್ಕೆ ಸಂತಸ ತಂದಿದೆ ಎಂದು ಅಖೀಲ ಕರ್ನಾಟಕ ಕೇತೇಶ್ವರ ಮೇದಾರ ಸಮಾಜದ ರಾಜ್ಯಾಧ್ಯಕ್ಷ ಪಿ.ಸಿ. ಪಾಟೀಲ್ ನುಡಿದರು. ಮೇದಾರ ಸಮುದಾಯದ ಕುಲಗುರುಗಳನ್ನಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ಗುರು ಬಸವಪ್ರಭು ಶ್ರೀ ಲಿಂಗೈಕ್ಯರಾದ ಬಳಿಕ ಕಳೆದ 5 ವರ್ಷದಲ್ಲಿ ಪೀಠಕ್ಕೆ ಇಬ್ಬರು ಗುರುಗಳನ್ನು ಮಾಡಲಾಗಿತ್ತು. ಅವರ ತಂದೆ, ತಾಯಿ ಅನಾ ರೋಗ್ಯದಿಂದ ಸ್ವಾಮೀಜಿಗಳು ಮಠ ಬಿಟ್ಟು ಹೋದರು. ಈ ಸಂದರ್ಭದಲ್ಲಿ ಬಸವಪ್ರಭುಗಳ ಬಳಿ ಬಾಲ್ಯದಿಂದಲೇ ವಟುವಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಎಂಬುವವರನ್ನು ಮೇದಾರ ಸಮಾಜದವರು ಗುರ್ತಿಸಿ, ಈ ಅನಾಥ ಮಠಕ್ಕೆ ಸ್ವಾಮೀಜಿಯಾಗಿ ನೇಮಕ ಮಾಡಬೇಕೆಂದು ಒಮ್ಮತದಿಂದ ನಿಶ್ಚಯ ಮಾಡಿಕೊಂಡೆವು. ಮೇದಾರಪೀಠಕ್ಕೆ ನೂತನ ಸ್ವಾಮೀಜಿ ನೇಮಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮುರುಘಾ ಶರಣರ ಮುಂದಿಟ್ಟೆವು. ಆಗ ಅವರು ದಾವಣಗೆರೆಯ ಕಾರ್ಯಕ್ರಮದಲ್ಲಿ ದೀಕ್ಷೆ ನೀಡುವುದಾಗಿ ತಿಳಿಸಿ, ಅದರಂತೆ ಇಂದು ನೂತನ ಸ್ವಾಮೀಜಿಗೆ ಕಾವಿ ಲಾಂಛನ, ಲಿಂಗದೀಕ್ಷೆ ನೀಡಿ, ನಮ್ಮ ಮಠಕ್ಕೆ ನೂತನ ಸ್ವಾಮೀಜಿಯಾಗಿ ಮಾಡಿದ್ದಾರೆ. ನೂತನ ಸ್ವಾಮೀಜಿ ನೇಮಕದಿಂದ ಸಮಾಜಕ್ಕೆ ಸಂತಸವಾಗಿದೆ ಎಂದರು. ಚಿತ್ರದುರ್ಗದ ಶಿಬಾರದಲ್ಲಿ ಮುರುಘಾಶರಣರು ನೀಡಿರುವ 5 ಎಕರೆ ಜಾಗದಲ್ಲಿ ಕೇತೇಶ್ವರ ಮಠ ನಿರ್ಮಾಣವಾಗುತ್ತಿದೆ. ಈಗ ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಅರ್ಧ ಕೆಲಸ ಮುಗಿದಿದೆ ಎಂದು ತಿಳಿಸಿದರು.