Advertisement
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ-ಹಿಂದೆ ಧಾರ್ಮಿಕ, ಜಾನಪದ, ಸಂಸ್ಕ್ರತಿಯ ತಳಹದಿಯಲ್ಲಿ ಸಾಮಾಜಿಕ ಜೀವನ ಸಾಗುತ್ತಿತ್ತು ಆದರೆ ಈಗ ವೈಜ್ಞಾನಿಕ ತಳಹದಿಯಲ್ಲಿ ನಾವೆಲ್ಲಾರೂ ಜೀನವ ಸಾಗಿಸುತ್ತಿದ್ದೇವೆ ಇದರಿಂದ ಧಾರ್ಮಿಕ, ಸಂಸ್ಕಾರ, ಸಂಸ್ಕೃತಿಯ ಮೌಲ್ಯಗಳು ಕುಸಿಯುತ್ತಿದೆ ಎಂದರು. ಇಂದಿನ ಜಾತ್ರಾ ಮಹೋತ್ಸವಗಳು ಸಹ ಆಧುನಿಕತೆಗೆ ಬದಲಾಗುತ್ತಿದ್ದು ವಿಜ್ಞಾನದ ಪರಂಪರೆಯಾಗಿ ಮಾರ್ಪಾಡಾಗುತ್ತಿದೆ, ಆದರೆ ಇದು ಕ್ಷಣಿಕಗಷ್ಟೆ ಸಿಮೀತವಾಗಿದ್ದು ಹಿಂದಿನ ಜಾನಪದ, ಜಾತ್ರಾ ಮಹೋತ್ಸವಗಳಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಜಾನುವಾರು ಜಾತ್ರಾ ಮಹೋತ್ಸವವನ್ನು ಪ್ರತಿವರ್ಷವೂ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಹಿರಿಯ ಮುಖಂಡ ಎಸ್.ಕೆ.ವೀರಪ್ಪ ಮಾತನಾಡಿ-ಹಿಂದೆ ಗುಡುಗಳಲೆ ಜಾನುವಾರುಗಳ ಜಾತ್ರೆ ವೈಭವದಿಂದ ನಡೆಯುತಿತ್ತು, ಜಾತ್ರೆಯಲ್ಲಿ ಸಾವಿರಾರು ಜಾನುವಾರುಗ ಸೇರುತ್ತಿತ್ತು ಆದರೆ ಈಗ ರೈತಾಪಿ ಜನರು ಜಾನುವಾರು ಸಾಕಾಣಿಕೆಯನ್ನು ಕಮ್ಮಿ ಮಾಡಿರುವುದ್ದರಿಂದ ಜಾತ್ರೆ ಯಲ್ಲಿ ಜಾನುವಾರುಗಳ ಸಂಖ್ಯೆ¿ ಇಳಿಕೆಯಾಗುತ್ತಿದೆ ಜಾತ್ರಾ ಸಮಿತಿ ವೈಭವವನ್ನು ಮರುಕಳಿಸಲು ಪ್ರಯತ್ನ ಪಡುತ್ತಿರುವುದು ಶ್ಲಾಘನಿಯ ಎಂದರು. ಎಎಸ್‌ಐ ಚಲುವರಾಜು, ಪ್ರಮುಖ ಕೆ.ವಿ.ಮಂಜುನಾಥ್ ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಸರೋಜಮ್ಮ, ತಾ.ಪಂ.ಸದಸ್ಯ ಅನಂತ್‌ಕುಮಾರ್, ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಸಂದೀಪ್, ಶ್ರೀಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಕಾರ್ಯದರ್ಶಿ.ಉಮಾಶಂಕರ್ ಪ್ರಮುಖಸಂಗಯ್ಯ, ಅವರದಾಳು ರಾಜಶೇಖರ್, ಗ್ರಾ.ಪಂ.ಪಿಡಿಒ ಸ್ಮಿತಾ, ಗ್ರಾ.ಪಂ.ಸದಸ್ಯರು ಹಾಜರಿದ್ದರು. Advertisement
ಗುಡುಗಳಲೆ ಜಯದೇವ ಜಾನುವಾರು ಜಾತ್ರೆಗೆ ಚಾಲನೆ
01:00 AM Jan 31, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.