ಹೊಸದಿಲ್ಲಿ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟಿ ಜಯಪ್ರದಾ ಅವರು ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್ ಅವರನ್ನು “ಪದ್ಮಾತವ್” ಚಿತ್ರದ ಅಲ್ಲಾವುದ್ದೀನ್ ಖಿಲ್ಜಿಗೆ ಹೋಲಿಸಿದ್ದಾರೆ.
ನಾನು 2009ರಲ್ಲಿ ಉತ್ತರ ಪ್ರದೇಶದ ರಾಮಪುರ ಕ್ಷೇತ್ರದಿಂದ ಪುನರಾಯ್ಕೆಯನ್ನು ಬಯಸಿದ್ದಾಗ ಆತ ನನಗೆ ತುಂಬಾ ಕಿರುಕುಳ ಕೊಟ್ಟಿದ್ದಾರೆ ಎಂದು ಜಯಪ್ರದಾ ಹೇಳಿದ್ದಾರೆ.
2009ರ ಮೇ ತಿಂಗಳಲ್ಲಿ ನಡೆದಿದ್ದ ಚುನಾವಣೆಯ ವೇಳೆ ತನ್ನ ಇಮೇಜ್ ಹಾಳು ಮಾಡಲು ಆತ ತುಂಬಾ ಅಗ್ಗದ ತಂತ್ರ ನಡೆಸಿದ್ದರು ಎಂದು ಆರೋಪಿಸಿದ್ದ ಜಯಲಲಿತಾ ಈಗ ಅದೇ ಆರೋಪವನ್ನು ಇಂದು ಶನಿವಾರ ಮತ್ತೆ ನೆನಪು ಮಾಡಿಕೊಂಡು ಆಜಂ ಖಾನ್ ಅವರನ್ನು ಪದ್ಮಾವತ್ ಚಿತ್ರದ ಅಲ್ಲಾವುದ್ದೀನ್ ಖಿಲ್ಜಿ ಅವರಿಗೆ ಹೋಲಿಸಿ ಹೀಗೆ ಹೇಳಿದ್ದಾರೆ :
“ಪದ್ಮಾವತ್ ಚಿತ್ರವನ್ನು ವೀಕ್ಷಿಸುತ್ತಿರುವಾಗ ನನಗೆ ಅದರಲ್ಲಿನ ಖೀಲ್ಜಿ ಪಾತ್ರ ಆಜಂ ಖಾನ್ ಅವರನ್ನು ನೆನಪಿತು. ಆತ ಚುನಾವಣೆ ವೇಳೆ ನನಗೆ ಕೊಟ್ಟಿದ್ದ ಕಿರುಕುಳುಗಳು ನೆನಪಿಗೆ ಬಂದವು’.
“ಚುನಾವಣೆ ವೇಳೆ ಅಂದು ಆಜಂ ಖಾನ್ ನನ್ನ ಫೋಟೋಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತಿರುಚಿದ ಸಿಡಿಗಳನ್ನು ಹಂಚುತ್ತಿದ್ದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ನಾನು ಎಚ್ಚರಿಕೆ ನೀಡಿದ್ದೆ. ಆದರೆ ಅದೇ ವೇಳೆ ನಾನು ಚುನಾವಣೆಯಲ್ಲಿ ಜಯಗಳಿಸಿದೆ’ ಎಂದು ಜಯಪ್ರದಾ ಹೇಳಿದರು.
ಅನಂತರದಲ್ಲಿ ನಟಿ ಜಯಲಲಿತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಯಿತು.
55ರ ಹರೆಯದ ಜಯಲಲಿತಾ ಅವರು ಈ ಹಿಂದೆಯೂ ಅನೇಕ ಬಾರಿ ಆಜಂ ಖಾನ್ ವಿರುದ್ಧ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.