Advertisement
ಈ ಮೂಲಕ ಡಿಸಿಎಂ ಓ.ಪನ್ನೀರ್‌ಸೆಲ್ವಂ ನೇತೃತ್ವದಲ್ಲಿ ಪಕ್ಷದ ಎಲ್ಲ ವ್ಯವಹಾರಗಳು ನಡೆಯಲಿದ್ದು, ಸಿಎಂ ಇ.ಪಳನಿಸ್ವಾಮಿ ಸಹಾಯಕರಾಗಿರಲಿದ್ದಾರೆ. ಇದರೊಂದಿಗೆ ಪಕ್ಷದ ಚಟುವಟಿಕೆಗಳ ನಿರ್ವಹಣೆಗೆ 11 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಉಪ ಕಾರ್ಯದರ್ಶಿ ಸ್ಥಾನದಿಂದ ದಿನಕರನ್ ವಜಾಗೊಂಡಿದ್ದಾರೆ.
Related Articles
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಬಳಿಯಲ್ಲಿನ ಪ್ಯಾಡಿಗ¾ಂಟನ್ ರೆಸಾರ್ಟ್‌ನಲ್ಲಿ ತಮಿಳುನಾಡು ಶಾಸಕರ ಹೈಡ್ರಾಮ ನಡೆದಿದೆ. ಟಿ.ಟಿ.ವಿ. ದಿನಕರನ್ ಬಣಕ್ಕೆ ಸೇರಿದ 17 ಶಾಸಕರು ಕೆಲವು ದಿನಗಳಿಂದ ಇಲ್ಲಿ ರಹಸ್ಯವಾಗಿ ಆಶ್ರಯ ಪಡೆದಿದ್ದಾರೆ. ಆದರೆ, ಶಾಸಕರೊಬ್ಬರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ, ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಿದ್ದರು. ಹೀಗಾಗಿ ತಮಿಳುನಾಡು ಪೊಲೀಸ್ ತಂಡ ಮಂಗಳವಾರ ಮಧ್ಯಾಹ್ನ ರೆಸಾರ್ಟ್‌ಗೆ ಧಾವಿಸಿ ಮಾಹಿತಿ ಸಂಗ್ರಹಿ ಸಿದೆ. ಮಂಗಳವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಬಂದ ತಮಿಳುನಾಡು ಪೊಲೀಸರು ತಮ್ಮ ತಪಾಸಣೆ ಸಂಬಂಧಿತ ಮಾಹಿತಿ ನೀಡಿದ್ದಾರೆ.
Advertisement
ಕೊಯಮತ್ತೂರಿನ ಡಿಸಿಪಿ ಸೇರಿ ಇಬ್ಬರು ಎಸ್ಪಿ ಗಳು, 5 ಇನ್ಸ್‌ಪೆಕ್ಟರ್ ಗಳು, 20 ಪೊಲೀಸ್ ಅಧಿಕಾರಿ ಗಳು ತಮಿಳುನಾಡು ಪೊಲೀಸ್ ತಂಡದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ತಮಿಳುನಾಡು ಪೊಲೀಸ್ ತಂಡ ತಪಾಸಣೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಶಾಸಕನಿಗಾಗಿ ಹುಡುಕಾಟ: ಮತ್ತೂಂದು ಬೆಳವಣಿಗೆಯಲ್ಲಿ ಪ್ರಕರಣವೊಂದರ ವಿಚಾರಣೆಗೆ ಅಗತ್ಯವಾಗಿದ್ದು, ತಲೆಮರೆಸಿಕೊಂಡಿರುವ ತಮಿಳು ನಾಡಿನ ಶಾಸಕರೊಬ್ಬರ ಪತ್ತೆಗಾಗಿ ನೆರೆ ರಾಜ್ಯದ ಪೊಲೀಸರು ಏಳನೇಹೊಸಕೋಟೆಯ ರೆಸಾರ್ಟ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ.