Advertisement

ಜಾವಾಂಯ್‌ ನಂ.1 ಬಿಡುಗಡೆ

08:20 AM Apr 14, 2018 | Team Udayavani |

ಮಂಗಳೂರು: ಸಂಗಾತಿ ಕ್ರಿಯೇಶನ್ಸ್‌ ನಿರ್ಮಾಣ ಮತ್ತು ಬಾಲಿವುಡ್‌ನ‌ ಭೋಜ್‌ಪುರಿ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ನಿರ್ದೇಶನದ ಬಹುನಿರೀಕ್ಷೆಯ ‘ಜಾವಾಂಯ್‌ ನಂ.1’ ಕೊಂಕಣಿ ಸಿನೆಮಾ ಶುಕ್ರವಾರ ಕರಾವಳಿಯ 13 ಥಿಯೇಟರ್‌ಗಳಲ್ಲಿ  ಬಿಡುಗಡೆಗೊಂಡಿತು. ಮಂಗಳೂರಿನ ಭಾರತ್‌ ಸಿನಿಮಾಸ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪೌಲ್‌ ಡಿ’ಸೋಜಾ ಅವರು ಚಿತ್ರ ಬಿಡುಗಡೆ ಮಾಡಿದರು. ‘ಕಳೆದ ಕೆಲ ವರ್ಷಗಳಲ್ಲಿ ನಿರಂತರವಾಗಿ ಕೊಂಕಣಿ ಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದು ಕೊಂಕಣಿ ಚಿತ್ರೋದ್ಯಮದ ಪ್ರಗತಿಯ ಸೂಚನೆಯಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಬೇಕು’ ಎಂದು ಆಶಿಸಿದರು.

Advertisement

ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ, ಹಿರಿಯ ನಿರ್ದೇಶಕ ರಿಚರ್ಡ್‌ ಕ್ಯಾಸ್ಟಲಿನೊ, ಸಂಗೀತ ನಿರ್ದೇಶಕ ಎರಿಕ್‌ ಒಝಾರಿಯೊ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಮೈಕಲ್‌ ಡಿ’ಸೋಜಾ, ನಟಿ ವರ್ಷಾ ಉಸ್ಗಾವಂಕರ್‌ ಮಾತನಾಡಿದರು. ನಿರ್ದೇಶಕ ಹೆನ್ರಿ ಫೆರ್ನಾಂಡಿಸ್‌ ಹಾಗೂ ಸಿರಿಲ್‌ ಕ್ಯಾಸ್ಟಲಿನೊ ವಂದಿಸಿದರು. ನಟರಾದ ಸ್ಟಾನಿ ಅಲ್ವರೆಸ್‌, ರಾನ್ಸ್‌ ಲಂಡನ್‌, ಸುಜಾತಾ ಅಂದ್ರಾಡೆ, ದೀಪಕ್‌ ಪಾಲಡ್ಕ, ಲೆವಿ ಜೆ ಪಿಂಟೊ, ಮಾಂಡ್‌ ಸೊಭಾಣ್‌, ಫೋರ್‌ವಿಂಡ್ಸ್‌ ಕಮ್ಯುನಿಕೇಶನ್ಸ್‌ನ ಇ. ಫೆರ್ನಾಂಡಿಸ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next