Advertisement

Jawan Prevue out: ನಾನು ಪಾಪವೋ ಪುಣ್ಯವೋ.. ʼಜವಾನ್ʼ ಪ್ರಿವ್ಯೂನಲ್ಲಿ ಜಬರ್ದಸ್ತ್ ಆ್ಯಕ್ಷನ್

11:41 AM Jul 10, 2023 | |

ಮುಂಬಯಿ: ಕಾಲಿವುಡ್‌ ಸ್ಟಾರ್‌ ನಿರ್ದೇಶಕ ಅಟ್ಲಿ ಮೊದಲ ಬಾರಿ ಕಿಂಗ್‌ ಖಾನ್‌ ಶಾರುಖ್‌ ಅವರಿಗೆ ಆ್ಯಕ್ಷನ್ ಕಟ್‌ ಹೇಳಿರುವ ʼಜವಾನ್‌ʼ ಸಿನಿಮಾದ ಪ್ರಿವ್ಯೂ ರಿಲೀಸ್‌ ಆಗಿದೆ.

Advertisement

ಶಾರುಖ್‌ ಖಾನ್‌ ಅವರು ʼಪಠಾಣ್‌ʼ ಸಿನಿಮಾದ ಬಿಗ್‌ ಸಕ್ಸಸ್‌ ಬಳಿಕ ʼಜವಾನ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಈ ಸಿನಿಮಾ ಪ್ಯಾನ್‌ ಇಂಡಿಯಾದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.

ಶಾರುಖ್‌ ಖಾನ್‌ ಇಲ್ಲಿ ಅಕ್ಷರಶಃ ಮಾಸ್ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಿಷನ್‌ ವೊಂದಕ್ಕೆ ತಂಡವನ್ನು ಕಟ್ಟಿಕೊಂಡಿದ್ದಾರೆ. ಆ ತಂಡವನ್ನು ಲೀಡ್‌ ಮಾಡುವ ಕ್ಯಾಪ್ಟನ್‌ ನಂತೆ ಶಾರುಖ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ಯಾರು, ಯಾರಲ್ಲ ಅನ್ನೋದು ಗೊತ್ತಿಲ್ಲ, ನಾನು ಪಾಪವೋ ಪುಣ್ಯವೋ ಎನ್ನುವುದನ್ನು ನಿಮ್ಮಲ್ಲೇ ಕೇಳಿಕೊಳ್ಳಿ”.. ಹೀಗೆ ಹೈಪ್‌ ಹುಟ್ಟಿಸುವ ಡೈಲಾಗ್ಸ್‌ ಗಳನ್ನು ಪ್ರಿವ್ಯೂ ನಲ್ಲಿ ತೋರಿಸಲಾಗಿದೆ. ನಾಯಕಿ ನಯನತಾರ ಕೂಡ ಈ ಸ್ರೀಕೆಟ್‌ ಮಿಷನ್‌ ನ ತಂಡದ ಭಾಗವಾಗಿದ್ದಾರೆ ಎನ್ನುವ ಝಲಕ್‌ ಇಲ್ಲಿದೆ. ಇದರೊಂದಿಗೆ ದೀಪಿಕಾ ಪಡುಕೋಣೆ ಸಾರಿ ಹಾಕಿಕೊಂಡು ಮಳೆಯಲ್ಲಿ ಮಾಡುವ ಸಾಹಸದ ದೃಶ್ಯವನ್ನು ತೋರಿಸಲಾಗಿದೆ. ಶಾರುಖ್‌ ಇಲ್ಲಿ ನಾನಾ ಬಗೆಯ ಲಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊನೆಯಲ್ಲಿ “ನಾನು ವಿಲನ್‌ ಆದರೆ ನನ್ನ ಮುಂದೆ ಯಾವ ಹೀರೋನೂ ನಿಲ್ಲಲ್ಲ” ಎನ್ನುವ ಡೈಲಾಗ್‌ ರೋಮಂಚನಗೊಳಿಸುತ್ತದೆ. ಇದೊಂದು ಪಕ್ಕಾ ಥ್ರಿಲ್ಲರ್‌ ಜರ್ನಿ ಆಗಿರಲಿದೆ ಎನ್ನುವುದು ಪ್ರಿವ್ಯೂ ನೋಡಿದ ಬಳಿಕ ಮನದಟ್ಟಾಗುವ ಅಂಶ.

ಮೊದಲ ಬಾರಿ ಹಿಂದಿ ಬಿಟೌನ್‌ ಗೆ ಎಂಟ್ರಿ ಆಗಿರುವ ಅನಿರುದ್ಧ ರವಿಚಂದರ್ ಅವರ ಬಿಜಿಎಂ ಪ್ರಿವ್ಯೂ ಝಲಕ್‌ ಗೆ ಸಖತ್‌ ಮ್ಯಾಚ್‌ ಆಗಿದೆ.

Advertisement

ʼಜವಾನ್‌ʼ ಒಂದು ಕಮರ್ಷಿಯಲ್ ಎಂಟರ್ಟೈನರ್ ಎಂದು ಹೇಳಲಾಗಿದ್ದು, ಶಾರುಖ್‌ ಇದರಲ್ಲಿ  ಒಬ್ಬ ಗುಪ್ತಚರ ಅಧಿಕಾರಿ ಮತ್ತು ಕಳ್ಳನಾಗಿ ಡಬಲ್‌ ಆ್ಯಕ್ಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ,ಪ್ರಿಯಾಮಣಿ ಹಾಗೂ ಮುಂತಾದ ಕಲಾವಿದರು ನಟಿಸಿರುವ ʼಜವಾನ್‌ʼ ಚಿತ್ರ ಸೆ.7 ರಂದು ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next