Advertisement

ಕ್ಯಾಂಪ್‌ನಲ್ಲಿ ಯೋಧನಿಂದ ಗುಂಡಿನ ದಾಳಿ ; ಸಹುದ್ಯೋಗಿ ಬಲಿ

10:11 AM May 03, 2019 | Team Udayavani |

ಭಾಘ್ನನ್‌ (ಪಶ್ಚಿಮ ಬಂಗಾಳ): ಇಲ್ಲಿನ ಅಸ್ಸಾಂ ರೈಫ‌ಲ್ಸ್‌ ಕ್ಯಾಂಪ್‌ನಲ್ಲಿ ಯೋಧನೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಸಹುದ್ಯೋಗಿ ಯೋಧ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಲಕ್ಷ್ಮೀ ಕಾಂತ ಬರ್ಮನ್‌ ಎನ್ನುವ ಯೋಧ 18 ಸುತ್ತುಗುಂಡು ಹಾರಿಸಿದ್ದು ಸಹುದ್ಯೋಗಿ ಯೋಧ ಭೋಲನಾಥ್‌ ದಾಸ್‌ ಎನ್ನುವ ಯೋಧ ಸಾವನ್ನಪ್ಪಿದ್ದು, ಇನ್ನಿಬ್ಬರು ಯೋಧರು ಗಾಯಗೊಂಡಿದ್ದಾರೆ.

ಗುಂಡಿನದಾಳಿ ನಡೆಸಿದ ಲಕ್ಷ್ಮೀ ಕಾಂತ್‌ ಬರ್ಮನ್‌ನನ್ನು ವಶಕ್ಕೆ ಪಡೆಯಲಾಗಿದೆ.

ಗುಂಡಿನ ದಾಳಿ ನಡೆಸಲು ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next