Advertisement

“ಆಜಾದ್ ಸಾವಿಗೆ ನೆಹರು ಹೂಡಿದ ಪಿತೂರಿಯೆ ಕಾರಣ” : ಬಿಜೆಪಿ ನಾಯಕ ಮದನ್ ದಿಲಾವರ್

06:39 PM Mar 01, 2021 | Team Udayavani |

ರಾಜಸ್ಥಾನ : ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಸಾವಿಗೆ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಪಿತೂರಿಯೇ ಕಾರಣ ಎಂಬ ವಿವಾದಾತ್ಮಕ ಹೇಳಿಕೆಯನ್ನು ರಾಜಸ್ಥಾನ ಬಿಜೆಪಿ ಶಾಸಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್ ನೀಡಿದ್ದಾರೆ.

Advertisement

ಬಿಜೆಪಿ ಶಾಸಕ ಮಾನಸಿಕ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ದಿಲಾವರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಓದಿ : ಮಹದಾಯಿ ವಿಚಾರದಲ್ಲಿ ಸರಕಾರ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ – ರಮೇಶ ಜಾರಕಿಹೊಳಿ

“ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದ ವೇಳೆ ಆಝಾದ್ ಹಣಕಾಸಿನ ಅಗತ್ಯವಿತ್ತು, ನೆಹರು ಅವರ ನರವನ್ನು ಆಜಾದ್ ಕೇಳಿದ್ದರು. 1200 ರೂ ಅಷ್ಟೇ ಆ ಕಾಲಕ್ಕೆ ಅವರಿಗೆ ಅಗತ್ಯವಿತ್ತು. ಹಣದ ವ್ಯವಸ್ಥೆ ಮಾಡುದಾಗಿ ಪಾರ್ಕ್ ಒಂದರಲ್ಲಿ ಕಾಯುವಂತೆ ಚಂದ್ರಶೇಖರ್ ಆಜಾದ್ ಅವರಿಗೆ ನೆಹರು ಸೂಚಿಸಿದ್ದರು. ಆದರೇ, ನೆಹರು ಬ್ರಿಟಿಷ್ ಪೊಲೀಸರಿಗೆ ನೀವು ಹುಡುಕುತ್ತಿದ್ದ ಉಗ್ರ ಚಂದ್ರಶೇಖರ್ ಆಜಾದ್ ಪಾರ್ಕ್ ನಲ್ಲಿ ಕೂತಿದ್ದಾನೆ” ಎಂದು ಮಾಹಿತಿ ನೀಡಿದ್ದರು” ಎಂದು ಉಪ ಚುನಾವಣೆ ನಡೆಯಲಿರುವ ರಾಜ್ ಸಮಂದ್ ನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ದಿಲಾವರ್ ಹೇಳಿದ್ದಾರೆ.

ಪಾರ್ಕ್ ನಲ್ಲಿ ಬ್ರಿಟಿಷ್ ಪೊಲೀಸರು ಅಝಾದ್ ಮೇಲೆ ಗುಂಡಿನ ದಾಳಿ ಮಾಡಿದರು. ಪ್ರತಿಯಾಗಿ ಅವರು ಗುಂಡು ಹಾರಿಸಿದರು, ಕೆಲವರನ್ನು ಕೊಂದರು. ಬ್ರಿಟಿಷ್ ಪೊಲೀಸ್ ಪಡೆ ತಮ್ಮನ್ನು ಸುತ್ತುವರಿದಿದೆ ಎಂದು ತಿಳಿದ ಆಜಾದ್ ಕೊನೆಗೆ ಉಳಿದಿದ್ದ ಗುಂಡಿನಿಂದ ತಮಗೆ ತಾವೇ ಗುಂಡಿಕ್ಕಿಕೊಂಡರು ಎಂದು ಕೂಡ ಮದನ್ ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಸುದ್ದಿ ಸಂಸ್ಥೆಗಳೊಂದಿಗೆ ಇಂದು(ಸೋಮವಾರ, ಮಾ.1) ಮಾತನಾಡಿದ ಅವರು ತಮ್ಮ ಹೇಳಿಕೆಯನ್ನು ಪ್ರತಿಪಾದಿಸಿಕೊಂಡಿದ್ದು, ಆಜಾದ್ ಸಾವಿಗೆ ನೆಹರು ಮೂಲ ಕಾರಣ ಎಂದು ಕೋಟಾ ಜಿಲ್ಲೆಯ ರಾಮಗಂಜ್ಮಂಡಿ ಶಾಸಕ ಹೇಳಿದ್ದಾರೆ.

ಓದಿ : ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

“ಆಜಾದ್ ಅವರ ಸಾವಿನ ನಿಜವಾದ ಆರೋಪಿ ಕಾಂಗ್ರೆಸ್ ನಿಂದ ದೇಶದ ಪ್ರಧಾನಿಯಾದ ಜವಹರಲಾಲ್ ನೆಹರು. ನೆಹರು ಹೂಡಿದ ಪಿತೂರಿಯಿಂದ ಅಝಾದ್ ಸಾವನ್ನಪ್ಪಿದರು ಎಂದು ಬಹಿರಂಗವಾಗಿ ಹೇಳುತ್ತಿದ್ದೇನೆ” ಎಂದು ದಿಲಾವರ್ ಹೇಳಿದ್ದಾರೆ.

ತಮಗೆ “ಪುಸ್ತಕಗಳು ಮತ್ತು ಸ್ಥಳಿಯ ಮಾಧ್ಯಮ” (“books and the local media”) ದ ಮೂಲಕ ವಿಚಾರ ತಿಳಿಯಿತು ಎಂದು ಮಾಧ್ಯಮದವರು ಕೇಳಿದ ಈ ಹೇಳಿಕೆಗೆ ಆಧಾರ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ದಿಲಾವರ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ ವ್ಯಕ್ತ ಪಡಿಸಿದ್ದು, “ದಿಲಾವರ್ ಅವರ ಇತಿಹಾಸದ ಬಗೆಗಿನ ಜ್ಞಾನ ತುಂಬಾ ಕೆಳ ಮಟ್ಟದಲ್ಲಿದೆ. ಸತ್ಯಾಂಶಕ್ಕೆ ಹೊರತಾಗಿ ಅವರು ಮಾತನಾಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪ್ರಚಾರ ಗಿಟ್ಟಿಸಿಕೊಳ್ಳು ಆಗಾಗ ಇಂತಹ ಸಾಕ್ಷ್ಯಗಳಿಲ್ಲದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ” ಎಂದು ರಾಜಸ್ಥಾನದ ಪ್ರದೇಶ್ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ಪುಷ್ಪೇಂದ್ರ ಭಾರಧ್ವಜ್ ಹೇಳಿದ್ದಾರೆ.

ಜನವರಿಯಲ್ಲಿ, “ರೈತರು ಎಂದು ಕರೆಯಲ್ಪಡುವವರು” ಡ್ರೈ ಫ್ರುಟ್ಸ್, ಚಿಕನ್ ಬಿರಿಯಾನಿ ಮತ್ತು ಇತರ ಐಷಾರಾಮಿ ಸುಖವನ್ನು ಪ್ರತಿಭಟನಾ ಸ್ಥಳಗಳಲ್ಲಿ ಅನುಭವಿಸುತ್ತಿದ್ದಾರೆ ಮತ್ತು ಇದು ಹಕ್ಕಿ ಜ್ವರವನ್ನು ಹರಡುವ ಪಿತೂರಿ ಎಂದು ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಬಗ್ಗೆ ದಿಲಾವರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಓದಿ : ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

Advertisement

Udayavani is now on Telegram. Click here to join our channel and stay updated with the latest news.

Next