ನೇರಳೆ, ಬೇಸಿಗೆಯಿಂದ ಹಿಡಿದು ಜೂನ್-ಜುಲೈವರೆಗೆ ಹಣ್ಣು ಕೊಡುವ ಮರ. ಮೊದಲೆಲ್ಲ ರಸ್ತೆ ಬದಿಯ ಮರಗಳಲ್ಲಿ ದಂಡಿಯಾಗಿ ಸಿಗುತ್ತಿದ್ದ ಈ ಹಣ್ಣು ಈಗ ಮಾರುಕಟ್ಟೆಯ ದುಬಾರಿ ಹಣ್ಣುಗಳಲ್ಲೊಂದು. ಪುರಾಣದ ಪ್ರಕಾರವೂ ನೇರಳೆಗೆ ಪ್ರಾಮುಖ್ಯವಿದ್ದು, ಶ್ರೀರಾಮ ವನವಾಸದಲ್ಲಿದ್ದಾಗ ನೇರಳೆ ಹಣ್ಣು ಸೇವಿಸಿಯೇ ಅದೆಷ್ಟೋ ಕಾಲ ಜೀವಿಸಿದ್ದ ಎಂದು ಹೇಳುತ್ತಾರೆ. ಭಾರತಕ್ಕೆ, ಜಂಬೂ ದ್ವೀಪ ಎನ್ನಲು ಕಾರಣವೂ ಜಂಬೂ ನೇರಳೆಯೇ ಅಂತೆ. ಇಂತಿಪ್ಪ ನೇರಳೆ ಹಣ್ಣಿನ ಸೇವನೆಯು ಹಲವಾರು ರೋಗಗಳಿಗೆ ರಾಮಬಾಣವೂ ಹೌದು.
1. ನೇರಳೆ ಹಣ್ಣು ಸೇವಿಸುವುದರಿಂದ ಪಚನ ಕ್ರಿಯೆ ವೃದ್ಧಿಸುತ್ತದೆ
2. ನೇರಳೆ ಹಣ್ಣು ಮತ್ತು ಬೀಜದ ಸೇವನೆಯಿಂದ ಮಧುಮೇಹ ಹತೋಟಿಗೆ ಬರುತ್ತದೆ. ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ, ನೇರಳೆ ಬೀಜದ ಪುಡಿ ಬೆರೆಸಿ ಕುಡಿಯಬಹುದು.
4. ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶವು ಹೇರಳವಾಗಿದೆ. ಇದನ್ನು ಅಧಿಕ ಋತುಸ್ರಾವ ಇರುವವರು ಹಾಗೂ ಅನೀಮಿಯಾದಿಂದ ಬಳಲುವವರು ಸೇವಿಸಿದರೆ ಉತ್ತಮ.
5. ಕಬ್ಬಿಣಾಂಶವು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಚರ್ಮದ ಆರೋಗ್ಯಕ್ಕೂ ಸಹಕಾರಿ
6. ನಿಯಮಿತವಾಗಿ ನೇರಳೆ ಹಣ್ಣು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತೆ
7. ನೇರಳೆಯಲ್ಲಿ ನಾರಿನಾಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ ಸಿ, ಬಿ ಅಧಿಕವಾಗಿರುವುದರಿಂದ, ಯಾರು ಬೇಕಾದರೂ ಈ ಹಣ್ಣನ್ನು ಸೇವಿಸಬಹುದು