ಪಾಂಡವಪುರ: ಅತ್ಯುತ್ತಮ ರಾಜ್ಯ ಮಟ್ಟದ ಎಸ್‌ಡಿಎಂಸಿ ಪ್ರಶಸ್ತಿ ಪುರಸ್ಕೃತ ಶತಮಾನ ಫ್ರೆಂಚ್ರಾಕ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭವಾಗಿರುವ ಹಿನ್ನೆಲೆ ಯಲ್ಲಿ ಎಸ್‌ಡಿಎಂಸಿ ಹಾಗೂ ಉನ್ನತೀ ಕರಣ ಸಮಿತಿ ವತಿಯಿಂದ ಮಕ್ಕಳ ದಾಖ ಲಾತಿಗಾಗಿ ಜಾಥಾ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಪಾಂಡವಪುರ ಮತ್ತು ಫ್ರೆಂಚ್ರಾಕ್ಸ್ ಶತಮಾನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡವಪುರ ಟೌನ್ ಇವರ ವತಿಯಿಂದ ಪಟ್ಟಣದ ವಿ.ಸಿ. ಕಾಲನಿಯ ಬಳಿ ನಡೆದ ಮಕ್ಕಳ ದಾಖ ಲಾತಿ ಆಂದೋಲನದ ಜಾಥಾ ಕಾರ್ಯ ಕ್ರಮಕ್ಕೆ ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ನಾರಾಯಣ ಗೌಡ ಚಾಲನೆ ನೀಡಿದರು.
ನಂತರ ನಾರಾಯಣಗೌಡ ಮಾತ ನಾಡಿ, ವಿದ್ಯೆ ಸಾಧಕನ ಸ್ವತ್ತು. ಆಂಗ್ಲ ಭಾಷೆ ನಾಗರಿಕತೆಯ ಸಂಕೇತ. ಆಂಗ್ಲ ಮಾಧ್ಯಮ ದಿಂದಾಗಿ ದೇಶ-ವಿದೇಶ ಗಳಲ್ಲಿ ನಮ್ಮ ದೇಶದ ಲಕ್ಷಾಂತರ ಜನರು ಹೊರಗಡೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಖಾಸಗಿ ಕಾನ್ವೆಂಟ್‌ಗಳ ಡೋನೇಷನ್ ಹಾವಳಿ ಹೆಚ್ಚಾಗಿರುವ ಈ ದಿಸೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಅದರಲ್ಲೂ ಎಸ್‌ಡಿಎಂಸಿ ಸಮಿತಿ ಹಾಗೂ ಉನ್ನತೀ ಕರಣ ಸಮಿತಿಯ ಶ್ರಮ ದಿಂದಾಗಿ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದು ತ್ತಿರುವ ಫ್ರೆಂಚ್ರಾಕ್ಸ್ ಶತಮಾನ ಸರ್ಕಾರಿ ಶಾಲೆಯಲ್ಲಿ ಸರ್ಕಾರ ಇದೀಗ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿ ಸಿದೆ. ಹೀಗಾಗಿ ಫ್ರೆಂಚ್ರಾಕ್ಸ್ ಶತಮಾನ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸ ಬೇಕು ಎಂದು ಮನವಿ ಮಾಡಿದರು.
ಫ್ರೆಂಚ್ರಾಕ್ಸ್ ಶತಮಾನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ, ಉನ್ನತೀಕರಣ ಸಮಿತಿ ಖಜಾಂಚಿ ಹಾರೋಹಳ್ಳಿ ಧನ್ಯಕುಮಾರ್,
ಉಪಾಧ್ಯಕ್ಷೆ ನೂರ್‌ಜಾನ್, ಸದಸ್ಯ ರಾದ ಟಿ.ಆರ್.ಸುನೀಲ್ಕುಮಾರ್, ಎಚ್.ಇ.ಯೋಗೇಶ್, ಉನ್ನತೀಕರಣ ಸಮಿತಿ ಸಂಚಾಲಕ ಎಂಜನಿಯರ್ ಎಂ.ರಾಜೀವ್, ಪದವೀಧರ ಮುಖ್ಯ ಶಿಕ್ಷಕ ಡಿ.ಸಿ.ಯೋಗಣ್ಣ, ಸಹ ಶಿಕ್ಷಕರಾದ ಶಿವಲಿಂಗಮ್ಮ, ಬಿ.ಡಿ.ಇಂದ್ರಕುಮಾರಿ, ಮುಖ್ಯ ಅಡುಗೆ ಸಿಬ್ಬಂದಿ ಜಯಲಕ್ಷ್ಮಮ್ಮ ಇತರರು ಇದ್ದರು.