Advertisement

ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ಜಾಥಾ

11:34 AM Jan 19, 2021 | Team Udayavani |

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಕುವವರ ವಿರುದ್ಧ ವೃಕ್ಷ ಎನ್ ಜಿಒ ನ ಬಾಸ್ಕಿಯಾರ್ಬ್ಸ್ ಯುವ ತಂಡದ ವತಿಯಿಂದ ಜಾಗೃತಿ ಜಾಥಾ ಎರಡನೇ ದಿನ ನಡೆಯಿತು.

Advertisement

ಸುಮಾರು 100 ರಷ್ಟು ಕಾರ್ಯಕರ್ತರು ನೇತ್ರಾವತಿ ಸೇತುವೆಯುದ್ದಕ್ಕೂ ಸಾಲಾಗಿ ನಿಂತು ಮೊಬೈಲ್ ಟಾರ್ಚ್ ಹಿಡಿದು ಕಸ ಬಿಸಾಡದಂತೆ ಎಚ್ಚರಿಕೆಯ ಜಾಗೃತಿ ಮೂಡಿಸಿದರು.

ಪರಿಸರ ಮಾಲಿನ್ಯದ ವಿರುದ್ಧ ಸಂಸ್ಥೆ ಪರಿಣಾಮಕಾರಿಯಾಗಿ ಜಾಗೃತಿ ಜಾಥಾಗಳನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ಬೆಂಗ್ರೆ ಸಮುದ್ರ ತೀರದಲ್ಲಿ ತ್ಯಾಜ್ಯದ ರಾಶಿ ವಿರುದ್ಧ ಜಾಗೃತಿಗೆ ಮುಂದಾದಾಗ, ಅಲ್ಲಿ ಶೇಖರಣೆಯಾಗುವ ತ್ಯಾಜ್ಯವೆಲ್ಲ ನೇತ್ರಾವತಿ ಸೇತುವೆಯಿಂದ ಎಸೆದದ್ದಾಗಿದೆ ಎಂಬುದು ಗೊತ್ತಾದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಲ್ಲೇ ಜಾಥಾ ಕೈಗೊಳ್ಳಲು ತೀರ್ಮಾನಿಸಿ, ಇಂದು ಎರಡನೇ ದಿನ ನಸುಕಿನಿಂದ ಕಾರ್ಯಕ್ರಮ ನಡೆಸಿದೆ.

ಇದನ್ನೂ ಓದಿ:ಫುಟ್ ಪಾತ್ ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್: 13 ಜನರ ದುರ್ಮರಣ

Advertisement

ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಬಿಗ್ ಬ್ಯಾಂಗ್ ಸಕ್ರಿಯ ಸದಸ್ಯ ಮಹಮ್ಮದ್ ಫೌಝಾನ್ ಶೇಖ್, ಹಸಿರುದಳ ನಾಗರಾಜ್ ರಾಘವ್ ಅಂಚನ್, ಎಪಿಡಿ ಫೌಂಡೇಶನ್ ನ ವಾಣಿಶ್ರೀ ಬಿ.ಆರ್ , ಮನಪಾ ಸದಸ್ಯೆ ವೀಣಾ ಉಪಸ್ಥಿತರಿದ್ದರು .

ಇದನ್ನೂ ಓದಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

ಉಳ್ಳಾಲ ನಗರಸಭೆ ಆಯುಕ್ತರ ಕಾಳಜಿ

ಉಳ್ಳಾಲ ನಗರಸಭೆ ಆಯುಕ್ತ ರಾಯಪ್ಪ ಅವರು ಎನ್ ಜಿಓ ಸದಸ್ಯರಿಗೆ ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆಯನ್ನು ಕಲ್ಪಿಸಿದರು. ತಮ್ಮ ವ್ಯಾಪ್ತಿಗೆ ಸೇರಿದ ಭಾಗದಲ್ಲೂ ನೇತ್ರಾವತಿ ಸೇತುವೆಯಿಂದ ಎಸೆಯುವ ಕಸದಿಂದ ತೊಂದರೆಯಾಗುತ್ತಿದೆ. ಆದರೆ ಸೇತುವೆ ಮನಪಾ ವ್ಯಾಪ್ತಿಗೆ ಬರುವುದರಿಂದ ಯಾವುದೇ ಕ್ರಮಕೈಗೊಳ್ಳಲು ಅಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಸ್ಥೆ ಜತೆಗೆ ಅಧಿಕಾರಿಯೂ ಕೈಜೋಡಿಸಿದರು.

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಭಾರತದಿಂದ 20 ಲಕ್ಷ ಕೋವಿಡ್ ಲಸಿಕೆ: ಪಾಕ್ ನಿಂದಲೂ ಮುಂದುವರಿದ ಪ್ರಯತ್ನ

Advertisement

Udayavani is now on Telegram. Click here to join our channel and stay updated with the latest news.

Next