Advertisement

ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ಗೆ ಇಲ್ಲ: ಬಿಸಿಸಿಐ

09:07 PM Oct 03, 2022 | Team Udayavani |

ನವದೆಹಲಿ: ಬೆನ್ನುನೋವಿಗೆ ಸಿಲುಕಿರುವ ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವುದನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿತು. ಶೀಘ್ರದಲ್ಲೇ ಬದಲಿ ಆಟಗಾರರನ್ನು ಹೆಸರಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಬುಮ್ರಾ ಬೆನ್ನುನೋವಿಗೆ ಕನಿಷ್ಠ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ಮಂಡಳಿ ಮೂಲಗಳು ಹೇಳಿದ್ದವು. ಆಗಲೇ ಅವರು ವಿಶ್ವಕಪ್‌ನಿಂದ ಬೇರ್ಪಡುವುದು ಖಚಿತವಾಗಿತ್ತು. ಇದೀಗ ಅಧಿಕೃತಗೊಂಡಿದೆ.

ಸದ್ಯ ಬುಮ್ರಾ ಬೆಂಗಳೂರಿನ ಎನ್‌ಸಿಎಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next