ದುಬೈ: ಹೈದರಾಬಾದ್‌ನಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಗಾಗಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ವಾಗ್ದಂಡನೆಗೆ ಗುರಿಯಾಗಿದ್ದು, ಐಸಿಸಿ ಛೀಮಾರಿ ಹಾಕಿದೆ.
ಇಂಗ್ಲೆಂಡ್ ಆಟಗಾರ ಆಲಿ ಪೋಪ್ ಅವರನ್ನು ಉದ್ದೇಶಪೂರ್ವಕವಾಗಿ ಅಡ್ಡಗಟ್ಟಿದ್ದಕ್ಕಾಗಿ, ದೋಷಪೂರಿತ ಅಂಶವನ್ನು ಪರಿಗಣಿಸಿರುವ ಐಸಿಸಿ ಇದು ‘ಅನುಚಿತ ದೈಹಿಕ ಸಂಪರ್ಕ’ ಎಂದು ಹೇಳಿದೆ.
ಬುಮ್ರಾ ಅವರ ಅಪರಾಧವು ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧವಾಗಿದ್ದು, ವಾಗ್ದಂಡನೆಗೆ ಹೆಚ್ಚುವರಿಯಾಗಿ, ಬುಮ್ರಾ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದ್ದು, ಇದು 24 ತಿಂಗಳ ಅವಧಿಯಲ್ಲಿ ಬುಮ್ರಾ ಅವರ ಮೊದಲ ಅಪರಾಧವಾಗಿದೆ.
“ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 81 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಬುಮ್ರಾ, ತನ್ನ ಫಾಲೋ ಥ್ರೂ ಪೂರ್ಣಗೊಳಿಸಿದ ನಂತರ, ಬ್ಯಾಟ್ಸ್ ಮ್ಯಾನ್ ರನ್‌ಗಾಗಿ ಓಡಿದಾಗ ಉದ್ದೇಶಪೂರ್ವಕವಾಗಿ ಓಲಿ ಪೋಪ್ ಅವರ ದಾರಿಯಲ್ಲಿ ಹೆಜ್ಜೆ ಹಾಕಿದರು, ಇದು ಸೂಕ್ತವಲ್ಲದ ದೈಹಿಕ ಸಂಪರ್ಕಕ್ಕೆ ಕಾರಣವಾಯಿತು” ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬುಮ್ರಾ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರರು ಮತ್ತು ಆಟಗಾರರ ಬೆಂಬಲಿಗ ಸಿಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.