Advertisement

Mumbai Indians ನಾಯಕ ಹಾರ್ದಿಕ್‌ ಬಗ್ಗೆ ಕೊನೆಗೂ ಮೌನ ಮುರಿದ ಜಸ್ಪ್ರೀತ್‌ ಬುಮ್ರಾ

03:54 PM Aug 18, 2024 | Team Udayavani |

ಮುಂಬೈ: 2024ರ ಐಪಿಎಲ್‌ ಸೀಸನ್‌ ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ನಾಯಕನಾಗಿ ನೇಮಕವಾದ ಹಾರ್ದಿಕ್‌ ಪಾಂಡ್ಯ (Hardik Pandya) ಕಷ್ಟದ ದಿನಗಳನ್ನು ಕಂಡರು. ಐದು ಬಾರಿಯ ಚಾಂಪಿಯನ್‌ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಪಟ್ಟದಿಂದ ಕೆಳಕ್ಕಿಳಿಸಿ ಹಾರ್ದಿಕ್‌ ಗೆ ನಾಯಕತ್ವ ನೀಡಿದ್ದು ಅಭಿಮಾನಿಗಳಿಗೆ ಶಾಕ್‌ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾದ ಈ ವಿಚಾರ ಬಳಿಕ ಮೈದಾನದಲ್ಲೂ ಪ್ರತಿಧ್ವನಿಸಿತು. ವಾಂಖೆಡೆ ಮೈದಾನದಲ್ಲೇ ಹಾರ್ದಿಕ್‌ ವಿರುದ್ದ ಜನರು ಕೂಗಿದರು. ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು. ಹತ್ತು ತಂಡಗಳ ಕೂಟದಲ್ಲಿ ಮುಂಬೈ ಕೊನೆಯದಾಗಿ ಕೂಟ ಮುಗಿಸಿತ್ತು.

Advertisement

ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಬೌಲರ್‌ ಜಸ್ಪ್ರಿತ್‌ ಬುಮ್ರಾ (Jasprit Bumrah) ಅವರು ಇದೀಗ ಈ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

“ನಾವು ಇಂತಹ ಘಟನೆಗಳನ್ನು ಬೆಂಬಲಿಸುವುದಿಲ್ಲ. (ಅಭಿಮಾನಿಗಳ ಕೂಗು) ಅದನ್ನು ನಾವು ಯಾರು ಬಯಸಿಲ್ಲ. ನಾವು ಹಾರ್ದಿಕ್‌ ಜತೆಗಿದ್ದೆವು. ಅವನಿಗೆ ಅಗತ್ಯವಿದ್ದಾಗ ಅವನ ಜತೆ ಮಾತನಾಡುತ್ತಿದ್ದೆವು. ಕೆಲವು ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೀಗ ಅದೆಲ್ಲಾ ಬದಲಾಗಿದೆ. ಟಿ20 ವಿಶ್ವಕಪ್‌ ಬಳಿಕ ಎಲ್ಲಾ ಬದಲಾಗಿದೆ. ಇದು ಪಯಣದ ಒಂದು ಭಾಗ. ನಾವು ಎಷ್ಟು ಬೆಂಬಲ ನೀಡಲು ಸಾಧ್ಯವೋ ಅಷ್ಟು ನೀಡಿದ್ದೇವೆʼ ಎಂದು ಬುಮ್ರಾ ಹೇಳಿದರು.

content-img

“ನಾವು ಭಾವನೆಯಿಂದ ನಡೆಸಲ್ಪಡುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಅಭಿಮಾನಿಗಳು ಭಾವುಕರಾಗುತ್ತಾರೆ. ಆಟಗಾರರು ಸಹ ಭಾವುಕರಾಗುತ್ತಾರೆ. ಕೆಲವೊಮ್ಮೆ ನಿಮ್ಮ ಸ್ವಂತ ಅಭಿಮಾನಿಗಳು ನಿಮ್ಮ ಬಗ್ಗೆ ಚೆನ್ನಾಗಿ ಮಾತನಾಡುವುದಿಲ್ಲ. ಇದು ಹೀಗೆಯೇ ಇರುವುದು. ನೀವು ಅದನ್ನು ತಡೆದುಕೊಳ್ಳಬೇಕು. ಏಕೆಂದರೆ ನೀವು ಹೊರಗೆ ಹೋಗಿ ಜನರನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.