ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರಂತೆ! ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್ ನಿಂದ ರಜೆ ಪಡೆದ ಬುಮ್ರಾ ಮುಂದಿನ ಟಿ20 ಸರಣಿಗೂ ಲಭ್ಯರಾಗುತ್ತಿಲ್ಲ. ಈ ಸಮಯದಲ್ಲಿ ವೇಗಿ ಬುಮ್ರಾ ವಿವಾಹವಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಹಿಂದೆ ಮಲಯಾಳಿ ನಟಿ ಅನುಪಮಾ ಪರಮೇಶ್ವರನ್ ಜೊತೆ ಬುಮ್ರಾ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ನಂತರ ಆ ವಿಚಾರಕ್ಕೆ ಪುಷ್ಠಿ ನೀಡುವ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಅನುಪಮಾ ಜೊತೆ ಬುಮ್ರಾ ವಿವಾಹವಾಗುತ್ತಿಲ್ಲ ಎಂದು ಕ್ರಿಕೆಟರ್ ನ ಕುಟುಂಬಿಕರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಬುಮ್ರಾ ಮದುವೆಯಾಗುತ್ತಿದ್ದಾರೆ? ಅದಕ್ಕೆ ಸದ್ಯ ಕೇಳಿ ಬರುತ್ತಿರುವ ಹೆಸರು ಸಂಜನಾ ಗಣೇಶನ್.
ಇದನ್ನೂ ಓದಿ: ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!
ಸಂಜನಾ ಗಣೇಶನ್ 2014ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದವರು. ನಂತರ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಕ್ರೀಡಾ ಕಾರ್ಯಕ್ರಮ ನಿರೂಪಕಿಯಾಗಿ ಪ್ರಸಿದ್ದಿ ಪಡೆದಿದ್ದಾರೆ. ಐಪಿಎಲ್, ಬ್ಯಾಡ್ಮಿಂಟನ್ ಲೀಗ್ ಗಳ ನಿರೂಪಣೆ ಮಾಡಿದ್ದಾರೆ. 2019ರ ಕ್ರಿಕೆಟ್ ವಿಶ್ವಕಪ್ ನಲ್ಲೂ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಸಂಜನಾ ಗಣೇಶನ್ ಅವರ ಜೊತೆ ಜಸ್ಪ್ರೀತ್ ಬುಮ್ರಾ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಇದೇ ತಿಂಗಳ 14 ಮತ್ತು 15ರಂದು ಗೋವಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಜಸ್ಪ್ರೀತ್ ಬುಮ್ರಾ ಅಥವಾ ಸಂಜನಾ ಇದುವರೆಗೆ ಖಚಿತಪಡಿಸಿಲ್ಲ.
ಇದನ್ನೂ ಓದಿ:ನಟಿ ಪೂರ್ಣ ಮನಮೋಹಕ ಫೋಟೋ ಗ್ಯಾಲರಿ