ವೇಗಿ ಜೇಸನ್ ಬೆಹರಾಂಡಾಫ್ ಏಕದಿನ ವಿಶ್ವಕಪ್ ತಯಾರಿಗಾಗಿ ತವರಿಗೆ ತೆರಳಿದ್ದಾರೆ. ಮೇ 2ರಿಂದ ಆಸ್ಟ್ರೇಲಿಯದಲ್ಲಿ ವಿಶ್ವಕಪ್ ಸಿದ್ಧತಾ ಶಿಬಿರ ಆರಂಭವಾಗಲಿದೆ.
Advertisement
ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಆಸ್ಟ್ರೇಲಿಯಕ್ಕೆ ತೆರಳುವ ಮುನ್ನ ಒಂದು ಪಂದ್ಯವನ್ನಾಡಲಿದ್ದಾರೆ. ಆರ್ ಸಿಬಿಯ ಮಾರ್ಕಸ್ ಸ್ಟಾಯಿನಿಸ್ ಕೂಡ ಸದ್ಯದಲ್ಲೇ ತವರಿನತ್ತ ಮುಖ ಮಾಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅನಂತರ ಮುಂಬೈ ತಂಡವನ್ನು ಸೇರಿದ ಬೆಹರಾಂಡಾಫ್, ಟ್ವಿಟರ್‌ನಲ್ಲಿ ತಮ್ಮ ನಿರ್ಗಮನದ ಕುರಿತು ಬರೆದುಕೊಂಡಿದ್ದಾರೆ.