Advertisement
ಬೇಡಿಕೆ ಎಷ್ಟೇ ಹೆಚ್ಚಾದರೂ ಗರಿಷ್ಠ ದರ 1,250 ರೂ. ನಿಗದಿಯಾಗಿದ್ದು ಈ ದರವೇ ಅಂತಿಮ, ಆದರೆ ಮಲ್ಲಿಗೆ ಅಟ್ಟೆಗೆ ಕನಿಷ್ಠ ದರವೆಂಬುದಿಲ್ಲ.
ಅಟ್ಟೆಗೆ ಕನಿಷ್ಠ 300 ರೂ. ಆದರೂ ನಿಗದಿ ಪಡಿಸಬೇಕು. 1 ಚೆಂಡು ಹೂ ಕೊಯ್ದು ಕಟ್ಟಲು ಚೆಂಡಿಗೆ 20 ರೂ.ಗಳಂತೆ 1 ಅಟ್ಟಿ ಹೂ ಕೊಯ್ದು ಕಟ್ಟಿದವರಿಗೆ 80 ರೂ. ನೀಡಬೇಕಾಗುತ್ತದೆ. ಹೂ ಕಟ್ಟುವ ದಾರವೂ
ದುಬಾರಿಯಾಗಿದೆ. ಎಲ್ಲ ಖರ್ಚು ಸೇರಿದಾಗ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿ ಬೆಳೆಗಾರನಿಗೆ ನಷ್ಟವೇ ಆಗುತ್ತದೆ ಎಂಬುದು ಕೃಷಿಕರ ಅಭಿಪ್ರಾಯ. ಶುಭ ಸಮಾರಂಭವಿಲ್ಲದೆ ಹೂವಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತ ಕಂಡಿದೆ. ಹೂವಿನ ಬೇಡಿಕೆಗನುಗುಣವಾಗಿ ದರ ನಿಗದಿಯಾಗುತ್ತದೆ. ಅಟ್ಟೆಗೆ ಗರಿಷ್ಠ ರೂ.1250 ನಿಗದಿಪಡಿಸಲಾಗಿದೆ. ಕನಿಷ್ಠ ದರವೆಂಬುದಿಲ್ಲ.
-ವಿನ್ಸೆಂಟ್ ರಾಡ್ರಿಗಸ್, ಶಂಕರಪುರ ಮಲ್ಲಿಗೆ ವ್ಯಾಪಾರಿ
Related Articles
– ವೈಲೆಟ್‌ಕ್ಯಾಸ್ತಲಿನೊ, ಕೋಡುಗುಡ್ಡೆ, ಮಲ್ಲಿಗೆ ಬೆಳೆಗಾರ್ತಿ
Advertisement