Advertisement
ವರ್ಷದ ಹೆಚ್ಚಿನ ಆದಾಯ ಎಪ್ರಿಲ್ -ಮೇ ತಿಂಗಳಲ್ಲಿ ಸಿಗುವುದರಿಂದ ಮಲ್ಲಿಗೆ ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ ನೂರಾರು ಕುಟುಂಬಗಳು, ಬೆಳೆಗಾರರು, ಕಟ್ಟೆ ವ್ಯಾಪಾರಿಗಳು, ಮಾರಾಟಗಾರರು ಕಂಗಾಲಾಗಿದ್ದಾರೆ. ಸೀಸನ್‌ನಲ್ಲೇ ಬೆಲೆ ಪಾತಾಳಕ್ಕೆ ಕೋವಿಡ್ ಕರ್ಫ್ಯೂನಿಂದಾಗಿ ಜಾತ್ರೆ, ಶುಭ ಸಮಾರಂಭಗಳಿಗೂ ಕಡಿವಾಣ ಬಿದ್ದ ಕಾರಣ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಗರಿಷ್ಠ ದರ 1,000 ರೂ. ಆಸುಪಾಸಿನಲ್ಲಿ ಇದ್ದ ದರ, ಜಿಲ್ಲೆಯ ಮಾರುಕಟ್ಟೆ ಬಿಟ್ಟು ಬೇರೆ ಕಡೆಗೆ ರವಾನೆಯಾಗದೆ ದರದಲ್ಲಿ ಭಾರೀ ಕುಸಿತ ಕಂಡಿದೆ. ಈ ಬಾರಿ ಮಾರ್ಚ್‌ನಿಂದ ಎಪ್ರಿಲ್ 3ನೇ ವಾರದವರೆಗೆ ಮೌಡ್ಯವಿದ್ದು, ಸೀಸನ್ ಆರಂಭವಾಗುವ ವೇಳೆಗೆ ಕೋವಿಡ್ ಮಲ್ಲಿಗೆ ಬೆಳೆಗಾರರ ಆದಾಯದ ಮೂಲ ಕಸಿದುಕೊಂಡಿದೆ. ಹೂ ಕೊಯ್ದು ಕಟ್ಟಿ 1 ಚೆಂಡು ಹೂವಿಗೆ 20 ರೂ.ಗೆ ನೀಡಬೇಕಾಗಿದೆ.
Related Articles
Advertisement
ಸಿಗದ ಪರಿಹಾರ, ಸಹಾಯಧನ :
ಮಲ್ಲಿಗೆ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಹೇಳಲಾಗುತ್ತಿದೆಯಾದರೂ ಹೆಚ್ಚಿನ ಕೃಷಿಕರು ಮಲ್ಲಿಗೆ ಬೆಳೆಯನ್ನು 5ರಿಂದ 10 ಸೆಂಟ್ಸ್ ಜಮೀನಿನಲ್ಲಿ ಬೆಳೆಯುತ್ತಿದ್ದು 1 ಎಕ್ರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡುವ ಬೆಳೆಗಾರರಿಗೆ ಸರಕಾರದಿಂದ ಸಬ್ಸಿಡಿ, ಕೃಷಿ ಸಲಕರಣೆಗಳಿಗೆ ಯಾವುದೇ ಸಹಾಯಧನ ಸಿಗುವುದಿಲ್ಲ.
ಕೋವಿಡ್ ದಿಂದಾಗಿ ಮಲ್ಲಿಗೆ ಬೆಳೆಗಾರ ರಿಗೆ ಸೀಸನ್‌ನ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಳೆದ ವರ್ಷ ಮುಖ್ಯಮಂತ್ರಿಯವರ ಪರಿಹಾರ ಧನ ಆರ್‌ಟಿಸಿಯಲ್ಲಿ ಮಲ್ಲಿಗೆ ಕೃಷಿ ಎಂದು ನಮೂದಿಸಿದವರಿಗೆ ಮಾತ್ರ ದೊರೆತಿದ್ದು, ಶೇ. 99 ಫಲಾನುಭವಿಗಳಿಗೆ ದೊರೆತಿಲ್ಲ. ಸರಕಾರ ಗಿಡವೊಂದಕ್ಕೆ ಕನಿಷ್ಠ 500 ರೂ.ನಂತೆ ಪರಿಹಾರ ನೀಡಿ ಕೃಷಿಕರ ಹಿತ ಕಾಯಬೇಕಿದೆ. –ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಮಲ್ಲಿಗೆ ಬೆಳೆಗಾರರ ಸಂಘ