Advertisement

ಮೇ ತಿಂಗಳ ಕನಿಷ್ಠ ದರಕ್ಕೆ ಮಲ್ಲಿಗೆ; ಅಟ್ಟೆಗೆ 130 ರೂ.

03:35 AM May 21, 2019 | sudhir |

ಶಿರ್ವ: ಶುಭ ಸಮಾರಂಭಗಳಿದ್ದರೂ ಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಹೂ ಬರುತ್ತಿರುವುದರಿಂದ ಶಂಕರಪುರ ಮಲ್ಲಿಗೆಯ ದರ ಭಾರೀ ಇಳಿಕೆಯಾಗಿದೆ.
ಸೋಮವಾರ ಅಟ್ಟೆಗೆ ಕಟ್ಟೆಯಲ್ಲಿ ರೂ. 130 ತಲುಪಿದೆ.

Advertisement

ಕಳೆದ ನವೆಂಬರ್‌ ತಿಂಗಳಲ್ಲಿ ಶಂಕರಪುರ ದರ ನಿಗದಿ ಕೇಂದ್ರದಿಂದ ದರ ಪರಿಷ್ಕರಣೆ ನಡೆದು ತೀರಾ ಅಭಾವದ ಸಂದರ್ಭದಲ್ಲಿ ಗರಿಷ್ಠ ಅಟ್ಟೆಗೆ 1,250 ರೂ. ದರ ನಿಗದಿ ಯಾಗಿತ್ತು. ಆದರೆ ಕನಿಷ್ಠ ದರ ಇನ್ನೂ ನಿಗದಿಯಾಗಿಲ್ಲ.
ಗರಿಷ್ಠ ದರ ನಿಗದಿಯಾದ ಬಳಿಕ ಮಾರ್ಚ್‌ ತಿಂಗಳಲ್ಲಿ ಕಟ್ಟೆಯ ಮಾರುಕಟ್ಟೆ ದರದಲ್ಲಿ ಇಳಿಕೆಯಾಗಿ ರೂ. 150 ತಲುಪಿತ್ತು. ಜಾತ್ರೆ, ಉತ್ಸವ, ಶುಭ ಸಮಾರಂಭಗಳು ಪ್ರಾರಂಭವಾಗಿ ಸಮ ತೋಲನದಲ್ಲಿದ್ದ ದರ ರವಿವಾರ- ಸೋಮವಾರ ಇಳಿಕೆ ಕಂಡಿದೆ.

ಈ ಬೇಸಗೆಯ ಕನಿಷ್ಠ
ಶುಭ ಸಮಾರಂಭಗಳು ಗರಿಷ್ಠ ನಡೆಯುವ ತಿಂಗಳಾಗಿ ದ್ದರೂ ಮಲ್ಲಿಗೆ ದರ ಮೇಯಲ್ಲಿ ತೀವ್ರ ಏರಿಳಿತ ದಾಖಲಿಸಿದೆ. ಫೆ. 9ರಂದು ಮಲ್ಲಿಗೆ ದರ 1,250 ರೂ.ಗೇರಿತ್ತು. ಮೇ 12ರಂದು 720 ರೂ. ದಾಖಲಿಸಿದ್ದ ದರ ಮೇ 17ರಂದು 260ಕ್ಕೆ ಇಳಿದಿತ್ತು. 18ರಂದು 420ಕ್ಕೆ ಏರಿದ್ದರೆ ಮರುದಿನ 170 ರೂ.ಗೆ ಕುಸಿದಿತ್ತು. ಮೇ 15ರಂದು ವೃಷಭ ಸಂಕ್ರಮಣವಾಗಿದ್ದು, ತುಳುನಾಡಿನ ಕೆಲವೆಡೆ ಭೂತಾರಾಧನೆಯ ವಿಧಿಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ಮೇ 25ರಂದು ಹತ್ತನಾವಧಿ (ಪತ್ತನಾಜೆ)ಯಾಗಿದ್ದು, ಆ ಬಳಿಕವೂ ಶುಭ ಸಮಾರಂಭಗಳು ಅಂತ್ಯಗೊಳ್ಳುತ್ತವೆ.

ಶುಭ ಸಮಾರಂಭ ಗಳಿದ್ದರೂ ಹೂವಿನ ಉತ್ಪಾದನೆ ಹೆಚ್ಚಾಗಿದ್ದು ದರ ಕುಸಿತ ಕಂಡಿದೆ. ಬೇಡಿಕೆಗೆ ಅನುಗುಣವಾಗಿ ದರ ನಿಗದಿಯಾಗುತ್ತದೆ. ಅಟ್ಟೆಗೆ ಗರಿಷ್ಠದರ ನಿಗದಿಯಾಗಿದ್ದರೂ ಕನಿಷ್ಠದರವೆಂಬುದಿಲ್ಲ.
-ಅಣ್ಣಿ ಶೆಟ್ಟಿ , ಶಿರ್ವ ಪದವು, ಮಲ್ಲಿಗೆ ವ್ಯಾಪಾರಿ

ದರ ಇಳಿದಾಗ ನಷ್ಟವಾಗುತ್ತದೆ. ಹೂ ಕಟ್ಟುವ ದಾರವೂ ದುಬಾರಿ ಯಾಗಿದ್ದು, ಅಟ್ಟೆಯ ದರ ಮಲ್ಲಿಗೆ ಕೊಯ್ದು ಕಟ್ಟುವವರಿಗೆ ಕೊಡಲು ಸರಿಯಾಗುತ್ತದೆ. ಬೆಳೆಗಾರರ ಸಂಕಷ್ಟ ಅರಿತು ಕನಿಷ್ಟ ದರ 300 ರೂ. ನಿಗದಿಪಡಿಸಿ ಹಿತ ಕಾಪಾಡಬೇಕಾಗಿದೆ.
– ಗ್ರೇಸಿ ಕಾಡೋìಜಾ, ಮಲ್ಲಿಗೆ ಬೆಳೆಗಾರರು

Advertisement
Advertisement

Udayavani is now on Telegram. Click here to join our channel and stay updated with the latest news.

Next