ಬೆಳಗಾವಿ: ಬಿ ಎಲ್ ಸಂತೋಷ್ ನಮ್ಮ ಪಕ್ಷದ ದೊಡ್ಡ ನಾಯಕರು. ಅವರನ್ನು ಸಚಿವ ರಮೇಶ ಜಾರಕಿಹೊಳಿ ಭೇಟಿ ಮಾಡುವುದು ಅಪರಾಧವಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಅವರು, ಸಚಿವ ರಮೇಶ ಜಾರಕಿಹೊಳಿ ದೆಹಲಿ ಭೇಟಿ ಸಾಮಾನ್ಯ. ನೀರಾವರಿ ಇಲಾಖೆ ಸಂಬಂಧ ಭೇಟಿ ಮಾಡಿದ್ದಾರೆ. ಇಲಾಖೆಗೆ ಸಂಬಂಧಿಸಿದಂತೆ ಕೋರ್ಟ್ ಕೆಲಸ ಇರುತ್ತೆ ಹೀಗಾಗಿ ಭೇಟಿ ಆಗಿರಬಹುದು. ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸಬಾರದು. ನಮ್ಮ ಪಕ್ಷದ ಸಂಘಟನಾ ಕಾರ್ಯದರ್ಶಿಯವರನ್ನು ಭೇಟಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಎಂ.ಟಿ.ಬಿ ನಾಗರಾಜ್, ಆರ್. ಶಂಕರ, ಮುನಿರತ್ನ, ವಿಶ್ವನಾಥ್ ಗೆ ಸಚಿವ ಸ್ಥಾನ ಸಿಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಮಂತ್ರಿಗಳು ಆಗುವ ವಿಶ್ವಾಸವಿದೆ. ಸಿಎಂ ಈ ಬಗ್ಗೆ ಹಲವು ಸಲ ಸ್ಪಷ್ಟವಾಗಿ ಹೇಳಿದ್ದಾರೆ.ಸಿ ಎಂ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ಉಪಚುನಾವಣೆ ಸೋತವರು ಎಂಎಲ್ ಸಿ ಆಗಿದ್ದಾರೆ. ಮುಂದೆ ಮಂತ್ರಿಗಳು ಆಗುವ ವಿಶ್ವಾಸವಿದೆ ಎಂದು ಗೆಳೆಯರ ಪರ ಸಚಿವ ಸುಧಾಕರ್ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ:ಡಬ್ಲುಎಚ್ ಒ ಘೋಷಿಸುವ ಕೋವಿಡ್ ಲಸಿಕೆಯೇ ಅಧಿಕೃತ: ಸಚಿವ ಕೆ. ಸುಧಾಕರ್
ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಇತರರು ಇದ್ದರು.