ರಾಂಚಿ: ಕರ್ನಾಟಕದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪು ಪುತ್ರ, ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರ ಮೇಲೆ ನಡೆದ ʻಲೋಕಾʼ ದಾಳಿಯಲ್ಲಿ ಕಂತೆ ಕಂತೆ ಹಣ ಸಿಕ್ಕ ಘಟನೆ ಹಸಿಯಾಗಿರುವ ಹೊತ್ತಲ್ಲೇ ಜಾರ್ಖಂಡ್‌ನ ಹಲವು ಸ್ಥಳಗಳಲ್ಲಿ ಇಡಿ ದಾಳಿ ಮಾಡಿದ್ದು ಐಎಎಸ್ ಅಧಿಕಾರಿಯೊಬ್ಬರಿ ಗೆ ಸೇರಿದ 3 ಕೋಟಿ ರೂ ವಶಪಡಿಸಿಕೊಂಡಿದೆ.
ಜಾರ್ಖಂಡ್‌ನ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಮಾಜಿ ಉದ್ಯೋಗಿ ಅಶೋಕ್ ಕುಮಾರ್ ಮತ್ತು ಎಸ್ಸಾನ್ ಅನ್ಸಾರಿ ಮನೆ ಮತ್ತು ಕಛೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ
ಅಶೋಕ್ ಮತ್ತು ಅನ್ಸಾರಿಗೆ ಸೇರಿದ 14 ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನ್ಸಾರಿ ಬಳಿ 3 ಕೋಟಿ ಋೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಹಣ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರಿಗೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಪಲಾಯನಗೈದ ಆರ್ಥಿಕ ಅಪರಾಧಿ: ವಿಜಯ್ ಮಲ್ಯ ಅರ್ಜಿ ವಜಾಗೊಳಿಸಿದ ಸುಪ್ರೀಂ