Advertisement

ಸರ್ಕಾರ ಹಠ ಬಿಟ್ಟು ಮಸೂದೆ ವಾಪಸ್‌ ಪಡೆಯಲಿ: ಸತೀಶ

06:11 PM Feb 08, 2021 | Team Udayavani |

ಬೆಳಗಾವಿ: ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ ನಿರಂತರವಾಗಿದ್ದು, ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕು. ಆದರೆ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಹಠ ಬಿಟ್ಟು ವಿವಾದಿತ ಕೃಷಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದರು.

Advertisement

ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರೈತರ ಹೋರಾಟಕ್ಕೆ ಕಾಂಗ್ರೆಸ್‌ ಪ್ರಿ ಪ್ಲಾನ್ ಎಂಬ ಬಿಜೆಪಿ ಆರೋಪ ನಿರಾಧಾರ. ರೈತರು ಮೊದಲಿನಿಂದಲೇ ಈ ಹೋರಾಟ ನಡೆಸಿದ್ದಾರೆ. ಅವರ ಬೆಂಬಲಕ್ಕೆ ನಾವು ನಿಂತಿದ್ದೇವೆ. ಜ.26ರಂದು ದೆಹಲಿಯಲ್ಲಿ ಉದ್ದೇಶಪೂರ್ವಕವಾಗಿಯೇ ಬಿಜೆಪಿ ರೈತರ ಹೋರಾಟದ ದಿಕ್ಕು  ಬದಲಿಸುವ ಪ್ರಯತ್ನ ಮಾಡಿದೆ. ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಹಿಂಸಾಚಾರ ನಡೆದಿದೆ. ಆದರೆ ಅವರ ಉದ್ದೇಶ ಯಶಸ್ವಿಯಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳಲ್ಲಿ ಗೊತ್ತಾಗಿದೆ ಎಂದರು.

ದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದ ಸೆಲೆಬ್ರೆಟಿಗಳು ಬೆಂಬಲಿಸಿರುವುದಕ್ಕೆ ಬಿಜೆಪಿ ವಿರೋಧಿ ಸುತ್ತಿರುವುದು ಸರಿಯಲ್ಲ. ಅಮೆರಿಕಕ್ಕೆ ಪ್ರಧಾನಿ ಮೋದಿ ಅವರೇ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಬೇರೆ ದೇಶಕ್ಕೆ ಇವರು ಏಕೆ ಹೋಗಬೇಕಿತ್ತು? ದೇಶದಲ್ಲಿ ಆಗಾಗ ಅನ್ಯಾಯವಾದಾಗ ಕಾಂಗ್ರೆಸ್‌ ಧ್ವನಿ ಎತ್ತುತ್ತದೆ. ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ಸೈನಿಕರು ಹೋಗಿದ್ದರು. ಬಾಂಗ್ಲಾದೇಶವನ್ನು ಇಂದಿರಾ ಗಾಂಧಿ  ಅವರೇ ಪ್ರತ್ಯೇಕ ದೇಶ ಮಾಡಿದ್ದರು. ಆದರೆ ಅಮೆರಿಕಕ್ಕೆ ಹೋಗಿ ಪ್ರಧಾನಿ ಮೋದಿ, ಟ್ರಂಪ್‌ ಪರವಾಗಿ ಏಕೆ ಪ್ರಚಾರ ಮಾಡಬೇಕಿತ್ತು. ಅದು ಬೇರೆ ದೇಶ ಅಲ್ಲವೇ ಎಂದು ಕಿಡಿಕಾರಿದರು.

ಇದನ್ನೂ ಓದಿ :ಶೃಂಗೇರಿ: ಗುರುಸ್ಪಂದನ ಕಾರ್ಯಕ್ರಮ

ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಉಪಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ  ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದಿದ್ದಾರೆ. ಭಾರತ ಸ್ವತಂತ್ರ ರಾಷ್ಟ್ರ. ಎಲ್ಲರಿಗೂ ವಾಕ್‌ ಸ್ವಾತಂತ್ರ್ಯ ಇದೆ. ಮಾತನಾಡಲು ಅವಕಾಶ ಇದೆ, ಮಾತನಾಡುತ್ತಾರೆ. ಕೊನೆಗೆ ಮತದಾರರು ತೀರ್ಮಾನ  ಮಾಡಬೇಕಾಗುತ್ತದೆ. ಕೆ.ಎಸ್‌. ಈಶ್ವರಪ್ಪ ಅವರೇ ಸಚಿವರಿದ್ದಾರೆ, ಪೆನ್ನು, ಹಾಳೆ ಅವರ ಹತ್ತಿರವೇ ಇದೆ. ಆದರೂ ಕುರುಬರ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಈಶ್ವರಪ್ಪ ಭಾಗಿಯಾಗಿದ್ದಾರೆ. ಈ ಬಗ್ಗೆ ಅವರೇ ಉತ್ತರ ನೀಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next