ಬೆಳಗಾವಿ: ಇಲ್ಲಿನ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಂಬಂಧ ಬಿಜೆಪಿ-ಕಾಂಗ್ರೆಸ್ ಮಧ್ಯೆ ಸಂಘರ್ಷ ಶುರುವಾಗಿದ್ದು, ಕೋಟೆ ಬಳಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಾರು ಎದುರು ಬದುರಾಗಿ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.
ರಾಜಹಂಸಗಡ ಕೋಟೆಗೆ ಶನಿವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿ ವಾಪಸಾಗುವಾಗ ಎದುರಿಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಾಹನ ನಿಂತಿತ್ತು. ಎರಡೂ ಕಾರುಗಳು ಎದುರು ಬದುರಾಗಿದ್ದರಿಂದ ಪಕ್ಕಕ್ಕೆ ಹೋಗಲು ಜಾಗ ಇರಲಿಲ್ಲ. ಎರಡೂ ವಾಹನಗಳ ಚಾಲಕರು ಸರಿಯದೇ ಅಲ್ಲಿಯೇ ನಿಂತು ಬಿಟ್ಟರು.
ಇದನ್ನೂ ಓದಿ:ಶಿವಸೇನೆಯ ಚಿಹ್ನೆ ಕದ್ದೊಯ್ದ ಕಳ್ಳರಿಗೆ ಪಾಠ ಕಲಿಸುತ್ತೇವೆ: ಶಿಂಧೆ ವಿರುದ್ಧ ಉದ್ಧವ್ ಕಿಡಿ
ಸುಮಾರು 10 ನಿಮಿಷಗಳ ಕಾಲ ವಾಹನಗಳು ಅಲ್ಲಿಯೇ ನಿಂತುಕೊಂಡಿದ್ದವು. ಆಗ ಪರಸ್ಪರ ಇಬ್ಬರೂ ನಾಯಕರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಒಂದೆಡೆ ಲಕ್ಷ್ಮೀ ಹೆಬ್ಬಾಳಕರಗೆ ಜೈ, ಚನ್ನರಾಜ ಹಟ್ಟಿಹೊಳಿಗೆ ಜೈ ಎಂದು ಘೋಷಣೆ ಮೊಳಗಿದರೆ, ಇನ್ನೊಂದೆಡೆ ರಮೇಶ ಜಾರಕಿಹೊಳಿ ಅವರಿಗೆ ಜೈ ಎಂದು ಘೋಷಣೆ ಮೊಳಗಿದವು. ಆಗ ಕೆಲ ಹೊತ್ತು ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.
ಕೆಲ ಹೊತ್ತಿನ ಬಳಿಕ ಚನ್ನರಾಜ ಹಟ್ಟಿಹೊಳಿ ಅವರೇ ತುಸು ಹಿಂದಕ್ಕೆ ಸರಿಸಿ ನಂತರ ಪಕ್ಕದಿಂದ ಅಲ್ಲಿಂದ ತೆರಳಿದರು. ಆದರೆ ರಮೇಶ ಜಾರಕಿಹೊಳಿ ಅವರ ವಾಹನ ಚಾಲಕ ಮಾತ್ರ ಕಾರನ್ನು ಅಲುಗಾಡಿಸದೇ ಅಲ್ಲಿಯೇ ನಿಂತು ಬಿಟ್ಟರು