ಟೋಕ್ಯೊ: ಭಾರತ ಎಪ್ಪತ್ತೈದನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವಂತೆಯೇ, ಜಪಾನ್ ಕೂಡ ತನ್ನ 76ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡಿದೆ.
ಎರಡನೇ ಪ್ರಪಂಚ ಮಹಾಯುದ್ಧದಲ್ಲಿ ಜಪಾನ್ ಸೋಲು ಅನುಭವಿಸಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಯೊಶಿದೆ ಸುಗಾ “ಮುಂದಿನ ದಿನಗಳಲ್ಲಿ ಯುದ್ಧದಂಥ ಕಠಿಣ ಪರಿಸ್ಥಿತಿ ದೇಶಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತದೆ. ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಂದಾಗಿಯೇ ಈಗ ನಮ್ಮಲ್ಲಿ ಶಾಂತಿ ನೆಲೆಸಿದೆ’ ಎಂದು ಹೇಳಿದ್ದಾರೆ.
ಗಮನಾರ್ಹ ಅಂಶವೆಂದರೆ, ಏಷ್ಯಾದ ರಾಷ್ಟ್ರಗಳ ಪ್ರಜೆಗಳ ವಿರುದ್ಧ ಜಪಾನ್ 2ನೇ ಪ್ರಪಂಚ ಮಹಾಯುದ್ಧದ ಅವಧಿಯಲ್ಲಿ ಕಿರುಕುಳ ನೀಡಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ಸುಗ ಕ್ಷಮೆ ಯಾಚಿಸಲಿಲ್ಲ. ಅವರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದ ಸಾಧನೆ-ಸವಾಲುಗಳ ಬಗ್ಗೆಯೇ ಹೆಚ್ಚಿನ ಅಂಶ ಕೇಂದ್ರೀಕೃತವಾಗಿತ್ತು.
ಇದನ್ನೂ ಓದಿ: ಅಫ್ಗಾನಿಸ್ತಾನ : ಕಾಬೂಲ್ ನನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ : ತಾಲಿಬಾನ್
ಆದರೆ, ಚಕ್ರವರ್ತಿ ನೊರೋಹಿಟೋ ತಮ್ಮ ಭಾಷಣದಲ್ಲಿ 20ನೇ ಶತಮಾನದ ಆರಂಭದಲ್ಲಿ ಯುದ್ಧದ ಸಂದರ್ಭದಲ್ಲಿ ಜಪಾನ್ ನಡೆಸಿದ ಯುದ್ಧಾಪರಾಧಗಳ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.