Advertisement

ಒಲಿಂಪಿಕ್‌ ಚಾಂಪಿಯನ್‌ ಟಕಹಾಶಿ ನಿವೃತ್ತಿ

10:00 PM Aug 20, 2020 | mahesh |

ಟೋಕಿಯೊ: ಜಪಾನಿನ ಒಲಿಂಪಿಕ್‌ ವನಿತಾ ಡಬಲ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಅಯಾಕಾ ಟಕಹಾಶಿ ಮುಂದಿನ ವರ್ಷ ಈ ಕಿರೀಟವನ್ನು ಉಳಿಸಿಕೊಳ್ಳುವ ರೇಸ್‌ನಲ್ಲಿ ಕಾಣಸಿಗುವುದಿಲ್ಲ. ಅವರು ಗುರುವಾರ ಬ್ಯಾಡ್ಮಿಂಟನ್‌ ಬಾಳ್ವೆಗೆ ವಿದಾಯ ಘೋಷಿಸಿದರು. 2016ರ ರಿಯೋ ಒಲಿಂಪಿಕ್‌ ವನಿತಾ ಡಬಲ್ಸ್‌ ಚಾಂಪಿ ಯನ್‌ಶಿಪ್‌ ಫೈನಲ್‌ನಲ್ಲಿ ಅಯಾಕಾ ಟಕಹಾಶಿ- ಮಿಸಾಕಿ ಮಟ್ಸುಟೊಮೊ ಸೇರಿಕೊಂಡು ಡೆನ್ಮಾರ್ಕ್‌ನ ಕ್ರಿಸ್ಟಿನಾ ಪೆಡರ್ಸೆನ್‌-ಕಮಿಲ್ಲಾ ರೈಟರ್‌ ಜೋಡಿಯನ್ನು ಹಿಮ್ಮೆಟ್ಟಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

Advertisement

ದೈಹಿಕ ಕ್ಷಮತೆ ಅಸಾಧ್ಯ
ಕೊರೊನಾ ಕಾರಣದಿಂದ ಟೋಕಿಯೊ ಒಲಿಂಪಿಕ್ಸ್‌ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಟಕಹಾಶಿ ವಿದಾಯದ ನಿರ್ಧಾರ ತೆಗೆದುಕೊಂಡಿದ್ದಾರೆ. 30 ವರ್ಷದ ತನಗೆ ಇನ್ನೊಂದು ವರ್ಷ ಕಾಲ ದೈಹಿಕ ಕ್ಷಮತೆಯನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ. ಟಕಹಾಶಿ ಕೊನೆಯ ಸಲ ಮಾರ್ಚ್‌ನಲ್ಲಿ ನಡೆದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಆಡಲಿಳಿದಿದ್ದರು. ಮಿಸಾಕಿ ಮಟ್ಸುಟೊಮೊ ಅವರೇ ಟಕಹಾಶಿ ಜತೆಗಾರ್ತಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next