Advertisement

Japan ಅಚ್ಚರಿಯ ರಾಜಕೀಯ ಬೆಳವಣಿಗೆ: ಸ್ಪರ್ಧಿಸುವುದಿಲ್ಲ ಎಂದ ಪ್ರಧಾನಿ ಕಿಶಿಡಾ

09:32 AM Aug 14, 2024 | Team Udayavani |

ಟೋಕಿಯೋ: ಜಪಾನ್ ನ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಫ್ಯೂಮಿಯೋ ಕಿಶಿಡಾ ಸೆಪ್ಟೆಂಬರ್‌ನಲ್ಲಿ ಬರಲಿರುವ ಪಕ್ಷದ ನಾಯಕತ್ವದ ಮತದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ಜಪಾನ್‌ಗೆ ಹೊಸ ಪ್ರಧಾನಿಯನ್ನು ಹೊಂದಲು ದಾರಿ ಮಾಡಿಕೊಟ್ಟಿದೆ.

Advertisement

2021 ರಲ್ಲಿ ಕಿಶಿಡಾ ಅವರು ಆಡಳಿತ ಲಿಬರಲ್ ಡೆಮಾಕ್ರಟಿಕ್ ಪಕ್ಷದ(LDP) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಮೂರು ವರ್ಷಗಳ ಅವಧಿಯು ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಳ್ಳುತ್ತದೆ.

ಕಿಶಿಡಾ ರೇಸ್ ನಿಂದ ಹೊರಗುಳಿದಿರುವುದರಿಂದ ನೂತನ ನಾಯಕ ಪ್ರಧಾನ ಮಂತ್ರಿಯಾಗಲಿದ್ದಾರೆ. ಏಕೆಂದರೆ LDP ಜಪಾನ್ ನ ಸಂಸತ್ತಿನ ಎರಡೂ ಸದನಗಳನ್ನು ನಿಯಂತ್ರಿಸುತ್ತದೆ.

ಅವರು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪಕ್ಷದ ನಾಯಕತ್ವ ಮತದಾನದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವುದು ಪಕ್ಷದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ತೋರಿಸುವ ಪ್ರಯತ್ನವಾಗಿದ್ದು, ಹೊಸ ನಾಯಕನಿಗೆ ಅವಕಾಶ ಮಾಡಿಕೊಟ್ಟು ಮಾದರಿಯಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಚುನಾವಣೆಯು ಅವರ ವರ್ಚಸ್ಸನ್ನು ಕಡಿಮೆ ಮಾಡಿತ್ತು. ಎಲ್‌ಡಿಪಿ ಸಂಸದರು ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಹೊಸ ಮುಖದ ಅಗತ್ಯವನ್ನು ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next