ಟೋಕಿಯೋ: ಇನ್ನು ಮುಂದೆ ಶಾಲೆಗಳಲ್ಲಿ ವಿದ್ಯಾರ್ಥಿನಿಯರು “ಪೋನಿಟೈಲ್’ ಮಾದರಿಯಲ್ಲಿ ಕೇಶವಿನ್ಯಾಸ ಮಾಡುವಂತಿಲ್ಲ!
ಜಪಾನ್‌ನಲ್ಲಿ ಇಂಥದ್ದೊಂದು ವಿಚಿತ್ರ ಆದೇಶವನ್ನು ಹೊರಡಿಸಲಾಗಿದೆ. ಹೆಣ್ಣುಮಕ್ಕಳು ಪೋನಿಟೈಲ್ (ಕೂದಲನ್ನು ಹಿಂದಕ್ಕೆ ಎಳೆದು ತಲೆಯ ಹಿಂಭಾಗದಲ್ಲಿ ಕಟ್ಟುವಂಥ ಕೇಶವಿನ್ಯಾಸ) ಹಾಕಿಕೊಂಡರೆ, ಅವರ ಕುತ್ತಿಗೆಯ ಭಾಗವು ನೀಳವಾಗಿ ಕಾಣಿಸುತ್ತದೆ. ಇದು ಗಂಡುಮಕ್ಕಳಲ್ಲಿ ಲೈಂಗಿಕ ಪ್ರಚೋದನೆ ಉಂಟುಮಾಡುತ್ತದೆ ಎನ್ನುವುದು ಶಾಲೆಗಳ ವಾದ!
ಹಿಂದಿನಿಂದಲೂ ಜಪಾನ್‌ನ ಶಾಲೆಗಳಲ್ಲಿ ಕೇಶಗಳಿಗೆ ಹಾಕುವ ಬಣ್ಣ, ಪರಿಕರಗಳು, ಮೇಕಪ್, ಸಮವಸ್ತ್ರ, ಹೆಣ್ಣುಮಕ್ಕಳು ಧರಿಸುವ ಲಂಗದ ಉದ್ದ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ವಿದ್ಯಾರ್ಥಿನಿಯರ ಕೇಶವು ಅಲೆ-ಅಲೆಯಂತಿದ್ದರೆ ಅಥವಾ ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಇಲ್ಲದಿದ್ದರೆ, “ನಮ್ಮ ಕೇಶವನ್ನು ಕೃತಕವಾಗಿ ಬದಲಾವಣೆ ಮಾಡಲಾಗಿಲ್ಲ’ ಎಂಬ ಪ್ರಮಾಣಪತ್ರವನ್ನು ಶಾಲೆಗಳಿಗೆ ಸಲ್ಲಿಸಬೇಕು ಎಂಬ ನಿಯಮವೂ ಇದೆ.
ಇದನ್ನೂ ಓದಿ:ಘೋಷಣೆ, ಸಿದ್ದಾಂತಗಳಿಂದ ಸರ್ಕಾರಗಳು ಜನರನ್ನು ಮರಳು ಮಾಡಲು ಸಾಧ್ಯವಿಲ್ಲ: ಆನಂದ್ ಸಿಂಗ್
ಟೋಕಿಯೋ ಮೆಟ್ರೋಪಾಲಿಟನ್ ಸರ್ಕಾರದ ಅಧೀನದಲ್ಲಿ ಬರುವ 177 ಹೈಸ್ಕೂಲ್‌ಗಳ ಪೈಕಿ 79 ಹೈಸ್ಕೂಲುಗಳು ಹೆತ್ತವರ ಸಹಿ ಇರುವಂತಹ ಇಂತಹ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ಸೂಚಿಸುತ್ತವೆ.