Advertisement
ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕದಿದ್ದರೂ ಪರವಾಗಿಲ್ಲ, ಉಳಿದ 15 ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸಿ ಅಂಕಿತ ಹಾಕಿಸಿಕೊಳ್ಳಲು ಪ್ರಯತ್ನಿ ಸುತ್ತಿರುವ ಚೀನಕ್ಕೆ ಇದು ಅತ್ಯಂತ ದೊಡ್ಡ ಹೊಡೆತ. ಅಲ್ಲದೆ, ಆರ್‌ಸಿಇಪಿ ಹೆಸರಿನಲ್ಲಿ ಏಷ್ಯಾ ಮಾರುಕಟ್ಟೆ ಹಾಗೂ ಪಾಶ್ಚಾತ್ಯ ಮಾರುಕಟ್ಟೆಗಳಲ್ಲಿ ತನ್ನ ಆಧಿಪತ್ಯ ಸಾಧಿ ಸುವ ಕನಸು ಕಾಣುತ್ತಿರುವ ಚೀನಕ್ಕೆ ಹಿನ್ನಡೆಯಾದಂತಾಗಿದೆ.
ಭಾರತ ಹಿಂದೆ ಸರಿದ ಕೂಡಲೇ ಭಾರತಕ್ಕೆ ಟಾಂಗ್ ನೀಡಿದ್ದ ಚೀನವು ಭಾರತ ತನ್ನ ನಿಲುವನ್ನು ಬದಲಿಸಿ ಯಾವಾಗ ಬೇಕಾದರೂ ಆರ್‌ಇಸಿಇಪಿಗೆ ಮರಳಬಹುದು. ಆದರೆ ಉಳಿದ 15 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕುವ ಕಡೆಗೆ ಮುಂದಡಿ ಇಡಲಿವೆ ಎಂದಿತ್ತು. ಈಗ ಜಪಾನ್ ಕೂಡ ಭಾರತವನ್ನು ಬಿಟ್ಟು ಆರ್‌ಸಿಇಪಿಗೆ ಸಹಿ ಹಾಕಲ್ಲ ಎಂದಿರುವುದು ಏಷ್ಯಾ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಆರ್‌ಸಿಇಪಿ
ಹೆಸರಿನ ಮೂಲಕ ತನ್ನ ಆಧಿಪತ್ಯ ಸ್ಥಾಪಿಸುವ ಕನಸು ಕಾಣುತ್ತಿದ್ದ ಚೀನಕ್ಕೆ ಮುಖಭಂಗವಾಗಿದೆ.