Advertisement

Japan; ಶೀಘ್ರ ನಭಕ್ಕೇರಲಿದೆ ಮರದ ಉಪಗ್ರಹ

12:58 AM Feb 20, 2024 | Team Udayavani |

ವಾಷಿಂಗ್ಟನ್‌: ವಿಶ್ವದಲ್ಲೇ ಮೊದಲ ಬಾರಿಗೆ ಮರದಿಂದ ಸಿದ್ಧಪಡಿಸಲಾದ ಉಪಗ್ರಹ “ಲಿಗ್ನೋಸ್ಯಾಟ್’ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲು ಜಪಾನ್‌ ಮತ್ತು ಅಮೆರಿಕ ಸಿದ್ಧವಾಗಿವೆ. ಜಪಾನ್‌ನ ಕ್ಯೋಟೋ ವಿ.ವಿ. ಸಿದ್ಧಪಡಿಸಿರುವ ಉಪಗ್ರಹವನ್ನು ಅಮೆರಿಕದ ನಾಸಾ ರಾಕೆಟ್‌ನಲ್ಲಿ ಉಡಾಯಿಸ ಲಾಗುತ್ತದೆ. ಮ್ಯಾಗ್ನೊಲಿಯ ಮರದಲ್ಲಿ ಈ ಉಪಗ್ರಹವನ್ನು ಜಪಾನ್‌ ವಿಜ್ಞಾನಿಗಳು ಸಿದ್ಧ ಪಡಿಸಿದ್ದಾರೆ. ಪ್ರಯೋಗಗಳ ಸಮಯದಲ್ಲಿ ಇದು ಸ್ಥಿರತೆ ಕಾಪಾಡಿಕೊಂಡಿದ್ದು, ಬಿರುಕು ಬಿಡುವುದಿಲ್ಲ ಎನ್ನುವುದು ಖಚಿತವಾಗಿದೆ.

Advertisement

ಬಾಹ್ಯಾಕಾಶದಲ್ಲಿ ಲೋಹದ ಅವಶೇಷಗಳ ಸಮಸ್ಯೆ ಹೆಚ್ಚುತ್ತಿರುವ ನಡುವೆ ಸಾವಯವ ವಸ್ತುಗಳಿಂದ ಉಪಗ್ರಹ ತಯಾರಿಸಲು ಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮರದ ಉಪಗ್ರಹವನ್ನು ಸಿದ್ಧಪಡಿಸಲಾಗಿದೆ.

ಯಾಕೆ ಮರ ಬಳಕೆ?
-ಇದುವರೆಗೆ ಲೋಹದ ಉಪಗ್ರಹಗಳು ಕಕ್ಷೆ ಸೇರುತ್ತಿದ್ದವು. ಅವಧಿ ಮುಗಿದ ಅವು ಭೂಮಿಗೆ ಮರಳುವಾಗ ಪೂರ್ಣ ಸುಟ್ಟುಹೋಗುತ್ತಿರಲಿಲ್ಲ.
-ಇದರಿಂದ ಅಲ್ಯುಮಿನಾ ಕಣಗಳು ಸೃಷ್ಟಿಯಾಗಿ ಅಂತರಿಕ್ಷದಲ್ಲಿ ತೇಲುವುದು ಮಾಮೂಲಿ. ಕಾಲಾಂತರದಲ್ಲಿ ಇವು ಭೂಮಿಗೆ ಮಾರಕವಾಗುತ್ತವೆ.
-ಅದಕ್ಕಾಗಿ ವಿಜ್ಞಾನಿಗಳಿಂದ ಮ್ಯಾಗ್ನೊಲಿಯ ಮರ ಬಳಕೆ. ಇದು ಭೂಮಿಯ ವಾತಾವರಣಕ್ಕೆ ಮರಳುವ ಸಂದರ್ಭದಲ್ಲಿ ಪೂರ್ಣ ಸುಟ್ಟು ಹೋಗುತ್ತದೆ.
-ಭೂಮಿಯ ವಾತಾವರಣವನ್ನು ಕಾಪಾಡಲು, ಲೋಹ ಸಂಪನ್ಮೂಲ ಸಂರಕ್ಷಿಸಲು ಈ ಕ್ರಮ.

ವಿಜ್ಞಾನಿಗಳು ಮಾಡಿದ್ದೇನು?
ಕ್ಯೋಟೋ ಸಂಶೋಧಕರು ಅನೇಕ ಪ್ರಯೋಗ ನಡೆಸಿ ಮರದ ಉಪಗ್ರಹ ಸಿದ್ಧಪಡಿಸಿ ದ್ದಾರೆ. ಹಲವು ರೀತಿಯ ಮರಗಳನ್ನು ಬಳಸಲಾಗಿತ್ತು. ಬಾಹ್ಯಾಕಾಶದ ಉಷ್ಣತೆ, ವಾತಾವರಣವನ್ನು ಪ್ರಯೋಗಾಲಯದಲ್ಲಿ ಮರುಸೃಷ್ಟಿಸ ಲಾಗಿತ್ತು. ಉಡಾವಣೆಯ ಒತ್ತಡವನ್ನು ಸಹಿಸಿಕೊಂಡು, ದೀರ್ಘ‌ಕಾಲ ಅಂತರಿಕ್ಷದಲ್ಲಿ ಸುತ್ತಬಲ್ಲ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ. ಎಲ್ಲ ಪ್ರಯೋಗಗಳ ಅನಂತರ ಮ್ಯಾಗ್ನೊಲಿಯ ಮರದಿಂದ ಮಾಡಿದ ಉಪಗ್ರಹ ಸಮರ್ಥ ಎನ್ನುವುದು ವಿಜ್ಞಾನಿಗಳಿಗೆ ಖಾತ್ರಿಯಾಗಿದೆ.

ಶೀಘ್ರದಲ್ಲೇ ಈ ಉಪಗ್ರಹ ಉಡಾವಣೆಗೊಳ್ಳಲಿದೆ .
-ಟಕಾವೊ ಡೋಯಿ , ಬಾಹ್ಯಾಕಾಶ ಎಂಜಿನಿಯರ್‌, ಕ್ಯೋಟೋ ವಿ.ವಿ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next