Advertisement

Japan ದ್ವೀಪದಲ್ಲಿ ಮುಳುಗಿದ ದ.ಕೊರಿಯಾದ ರಾಸಾಯನಿಕ ಟ್ಯಾಂಕರ್: 8 ಮೃತ್ಯು

06:34 PM Mar 20, 2024 | Team Udayavani |

ಟೋಕಿಯೊ: ದಕ್ಷಿಣ ಕೊರಿಯಾದ ರಾಸಾಯನಿಕ ಟ್ಯಾಂಕರ್ ಹಡಗು ಬುಧವಾರ ನೈಋತ್ಯ ಜಪಾನ್‌ನ ದ್ವೀಪದಲ್ಲಿ ಮುಳುಗಿದ್ದು, ಅದರಲ್ಲಿದ್ದ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ಸಿಬಂದಿ ಪಾರಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

Advertisement

ಟ್ಯಾಂಕರ್ 980 ಟನ್ ಅಕ್ರಿಲಿಕ್ ಆಮ್ಲವನ್ನು ಸಾಗಿಸುತ್ತಿತ್ತು, ಇದು ಅಂಟುಗಳು, ಬಣ್ಣಗಳು ಮತ್ತು ಪಾಲಿಶ್‌ಗಳಲ್ಲಿ ಬಳಸಲಾಗುವ ನಾಶಕಾರಿ ಸಾವಯವ ಮಿಶ್ರಣವಾಗಿದೆ.

ಯಾವುದೇ ಸೋರಿಕೆ ಪತ್ತೆಯಾಗಿಲ್ಲ, ಸೋರಿಕೆಯಾದಲ್ಲಿ ಯಾವ ಪರಿಸರ ಸಂರಕ್ಷಣ ಕ್ರಮಗಳ ಅಗತ್ಯವಿದೆ ಎಂದು ಅಧ್ಯಯನ ಮಾಡುತ್ತಿದ್ದಾರೆ. ನೈಋತ್ಯ ಜಪಾನ್‌ನ ಟೋಕಿಯೊದಿಂದ ಸುಮಾರು 1,000 ಕಿಮೀ (620 ಮೈಲುಗಳು) ದೂರದಲ್ಲಿರುವ ಜಪಾನ್‌ನ ಮುಟ್ಸೂರ್ ದ್ವೀಪದ ಬಳಿ ಟ್ಯಾಂಕರ್ ವಾಲುತ್ತಿದೆ ಎಂದು ಜಪಾನ್ ಕೋಸ್ಟ್ ಗಾರ್ಡ್ ರಾಸಾಯನಿಕ ಟ್ಯಾಂಕರ್ ಕಿಯೋಯಂಗ್ ಸನ್‌ನಿಂದ ತುರ್ತು ಕರೆ ಸ್ವೀಕರಿಸಿತ್ತು. ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಹಡಗು ಸಂಪೂರ್ಣ ಮುಳುಗಿತ್ತು.

ಹಡಗಿನಲ್ಲಿದ್ದ 11 ಸಿಬಂದಿಯಲ್ಲಿ ಒಂಬತ್ತು ಮಂದಿ ಶವಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಒಬ್ಬ ಸಿಬಂದಿ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದ್ದು, ಕೋಸ್ಟ್ ಗಾರ್ಡ್ ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next