Advertisement
ಸತತ ಮೂರನೇ ಬಾರಿ ಸ್ಥಳೀಯ ಫೇವರಿಟ್ ಒಕುಹರಾ ಅವರನ್ನು ಎದುರಿಸಿದ ಸಿಂಧು ತನ್ನ ಶ್ರೇಷ್ಠ ಆಟವಾಡಲು ಅಸಮರ್ಥರಾದರು. 47 ನಿಮಿಷಗಳ ಹೋರಾಟದಲ್ಲಿ ಹಲವು ಅನಗತ್ಯ ತಪ್ಪುಗಳನ್ನು ಮಾಡಿದ ಸಿಂಧು 18-21, 18-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. ಕಳೆದ ಎರಡು ಹೋರಾಟಗಳಲ್ಲಿ ಅವ ರಿಬ್ಬರು ದೀರ್ಘ ರ್ಯಾಲಿಗಳ ಕಾದಾಟ ನಡೆಸಿದ್ದರು. ಆದರೆ ಇಲ್ಲಿ ಅಂತಹ ಯಾವುದೇ ತೀವ್ರ ಸ್ಪರ್ಧೆಯನ್ನು ಸಿಂಧು ನೀಡಲಿಲ್ಲ. 110 ನಿಮಿಷಗಳ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ಸೆಣಸಾಟದಲ್ಲಿ ಸಿಂಧು ಸೋತಿದ್ದರೆ 83 ನಿಮಿಷಗಳ ಕೊರಿಯಾ ಓಪನ್‌ನ ಫೈನಲ್‌ನಲ್ಲಿ ಸಿಂಧು ಜಯಭೇರಿ ಬಾರಿಸಿದ್ದರು.
Related Articles
Advertisement
ಪ್ರಣಯ್ ಕ್ವಾರ್ಟರ್ಫೈನಲಿಗೆಯುಎಸ್ ಓಪನ್ ಚಾಂಪಿಯನ್ ಎಚ್‌ಎಸ್ ಪ್ರಣಯ್ ಚೈನೀಸ್ ತೈಪೆಯ ಸು ಜೆನ್ ಹಾವೊ ಅವರನ್ನು 21-16, 23-21 ಗೇಮ್‌ಗಳಿದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ದ್ವಿತೀಯ ಶ್ರೇಯಾಂಕದ ಚೀನದ ಶಿ ಯುಕಿ ಅವರನ್ನು ಎದುರಿಸಲಿದ್ದಾರೆ. ಈ ವರ್ಷದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಫೈನಲಿಗೇರಿದ್ದ ವಿಶ್ವದ ಎರಡನೇ ರ್‍ಯಾಂಕಿನ ಶಿ ಯುಕಿ ಇನ್ನೊಂದು ಪಂದ್ಯದಲ್ಲಿ ಭಾರತದ ಸಮೀರ್ ವರ್ಮ ಅವರೆದುರು 10-21, 21-17, 21-15 ಗೇಮ್‌ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದರು. ಸಮೀರ್ ವರ್ಮ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಕೂಟದ ಪ್ರಶಸ್ತಿ ಜಯಿಸಿದ್ದರು. ಇಲ್ಲಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಅಮೋಘ ರೀತಿಯಲ್ಲಿ ಹೋರಾಡಿ ನಾಲ್ಕನೇ ಶ್ರೇಯಾಂಕದ ಇಂಡೋನೇಶ್ಯದ ಪ್ರವೀಣ್ ಜೋರ್ಡಾನ್ ಮತ್ತು ಡೆಬಿ ಸುಶಾಂತೊ ಅವರೆದುರು 27-29, 21-16, 12-21 ಗೇಮ್‌ಗಳಿಂದ ವೀರೋಚಿತ ಸೋಲು ಕಂಡರು.