Advertisement

ಜಪಾನ್‌ ಓಪನ್‌ ಪ್ರಣಯ್‌-ಶ್ರೀಕಾಂತ್‌ ಮುಖಾಮುಖಿ

11:36 PM Jul 25, 2023 | Team Udayavani |

ಟೋಕಿಯೊ: ಮಂಗಳವಾರ ಮೊದಲ್ಗೊಂಡ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ವಿಶ್ವದ ನಂ. 10 ಆಟಗಾರ ಎಚ್‌.ಎಸ್‌. ಪ್ರಣಯ್‌ ದೊಡ್ಡ ಬೇಟೆಯಾಡಿ ಸುದ್ದಿಯಾಗಿದ್ದಾರೆ. ಅವರು ಈ ಬಾರಿಯ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌, ಚೀನದ ನಂ.6 ಆಟಗಾರ ಲಿ ಶಿ ಫೆಂಗ್‌ ಅವರನ್ನು 21-17, 21-13 ನೇರ ಗೇಮ್‌ಗಳಿಂದ ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಇಲ್ಲಿ ಭಾರತದ ಮತ್ತೋರ್ವ ಆಟ ಗಾರ ಕೆ. ಶ್ರೀಕಾಂತ್‌ ಅವರನ್ನು ಎದುರಿಸಲಿದ್ದಾರೆ.

Advertisement

ದಿನದ ಇನ್ನೊಂದು ಪಂದ್ಯದಲ್ಲಿ ಕೆ. ಶ್ರೀಕಾಂತ್‌ 21-13, 21-13 ಅಂತರದಿಂದ ತೈವಾನ್‌ನ ಚೌ ತೀನ್‌ ಚೆನ್‌ ಅವರನ್ನು ಪರಾಭವಗೊಳಿಸಿದರು. ಇಲ್ಲಿ ಗೆದ್ದವರು ಅಗ್ರ ಶ್ರೇಯಾಂಕದ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಸೆಣಸಬೇಕಿದೆ. ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ- ಗಾಯತ್ರಿ ಗೋಪಿಚಂದ್‌ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಅವರು ಜಪಾನ್‌ನ ಸಯಾಕಾ ಹೊಬಾರಾ-ಯುಯಿ ಸುಯಿಜು ವಿರುದ್ಧ 11-21, 21-15, 21-14 ಅಂತರದಿಂದ ಗೆದ್ದು ಬಂದರು.

ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌ ಆತಿಥೇಯ ದೇಶದ ಅನುಭವಿ ಆಟ ಗಾರ್ತಿ ಅಕಾನೆ ಯಮಾಗುಚಿ ಅವರಿಗೆ ಸಾಟಿ ಯಾಗಲಿಲ್ಲ. ಯಮಾಗುಚಿ 21-17, 21-17ರಿಂದ ಭಾರತದ ಆಟಗಾರ್ತಿಗೆ ಸೋಲುಣಿ ಸಿದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಎನ್‌. ಸಿಕ್ಕಿ ರೆಡ್ಡಿ-ರೋಹನ್‌ ಕಪೂರ್‌ ಕೂಡ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next