Advertisement
ಇದು ಈ ವರ್ಷದ 13 ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪಂದ್ಯಾವಳಿಗಳಲ್ಲಿ ಸಿಂಧು ಮೊದಲ ಸುತ್ತಿನ ಸೋಲಿಗೆ ಸಿಲುಕಿದ 7ನೇ ನಿದರ್ಶನವಾಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಸೋಲಿನ ದವಡೆಯಿಂದ ಪಾರಾಗಿ ದ್ವಿತೀಯ ಸುತ್ತು ತಲುಪಿ ದರು. ಅವರು ಭಾರೀ ಹೋರಾಟ ನೀಡಿದ ಭಾರತದ ಮತ್ತೋರ್ವ ಆಟಗಾರ ಪ್ರಿಯಾಂಶು ರಾಜಾವತ್ ವಿರುದ್ಧ 21-15, 12-21, 24-22 ಅಂತರದ ಜಯ ಸಾಧಿಸಿದರು. ಸೇನ್ ಅವರ ದ್ವಿತೀಯ ಸುತ್ತಿನ ಎದುರಾಳಿ ಜಪಾನ್‌ನ ಕಾಂಟ ಸುನೆಯಾಮ. ಮಿಥುನ್ ಮಂಜುನಾಥ್ ದಿಟ್ಟ ಹೋರಾಟ ನೀಡಿಯೂ ಚೀನದ ವೆಂಗ್ ಹಾಂಗ್ ಯಾಂಗ್ ವಿರುದ್ಧ 21-13, 22-24, 18-21 ಅಂತರದಿಂದ ಸೋತು ಹೋದರು. ಈ ಜಿದ್ದಾಜಿದ್ದಿ ಪಂದ್ಯ ಒಂದು ಗಂಟೆ, 25 ನಿಮಿಷಗಳ ತನಕ ಸಾಗಿತು.
Related Articles
ರವಿವಾರವಷ್ಟೇ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ 3 ಗೇಮ್‌ಗಳ ಹೋರಾಟದ ಬಳಿಕ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾದರು. ಇವರು ಇಂಡೋನೇಷ್ಯಾದ ಲಿಯೋ ರೋಲಿ ಕರ್ನಾಂಡೊ-ಡೇನಿಯಲ್ ಮಾರ್ಟಿನ್ ವಿರುದ್ಧ 21-16, 11-21, 21-13ರಿಂದ ಗೆದ್ದರು.
Advertisement