Advertisement

ಸಾಯಿ ಪ್ರಣೀತ್‌ಗೆ ಸೆಮಿಫೈನಲ್‌ನಲ್ಲಿ ಸೋಲು

12:02 AM Jul 28, 2019 | Team Udayavani |

ಟೋಕಿಯೊ: ಬಿ. ಸಾಯಿ ಪ್ರಣೀತ್‌ “ಜಪಾನ್‌ ಓಪನ್‌’ ಬ್ಯಾಡ್ಮಿಂಟನ್‌ ಕೂಟದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಟೋಕಿಯೊ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

Advertisement

ಶನಿವಾರದ ಸೆಮಿಫೈನಲ್‌ ಹಣಾಹಣಿಯಲ್ಲಿ ಸಾಯಿ ಪ್ರಣೀತ್‌ ಆತಿಥೇಯ ನಾಡಿನ ಕೆಂಟೊ ಮೊಮೊಟ ವಿರುದ್ಧ 18-21, 12-21 ನೇರ ಗೇಮ್‌ಗಳ ಆಘಾತಕ್ಕೆ ಸಿಲುಕಿದರು.
ನೆಚ್ಚಿನ ಆಟಗಾರ ಮೊಮೊಟ ವಿರುದ್ಧ ಮೊದಲ ಗೇಮ್‌ನಲ್ಲಿ ಪ್ರಣೀತ್‌ ಉತ್ತಮ ಹೋರಾಟ ಸಂಘಟಿಸಿದರೂ ದ್ವಿತೀಯ ಗೇಮ್‌ ವೇಳೆ ಬಹಳ ಹಿಂದುಳಿದರು. 3-1 ಮುನ್ನಡೆಯೊಂದಿಗೆ ಪ್ರಣೀತ್‌ ಆಟ ಮೊದಲ್ಗೊಂಡಿತ್ತು. ಆದರೆ ತಿರುಗಿ ಬಿದ್ದ ಮೊಮೊಟ ಬ್ರೇಕ್‌ ವೇಳೆ 11-8 ಲೀಡ್‌ ಗಳಿಸುವಲ್ಲಿ ಯಶಸ್ವಿಯಾದರು. 23 ನಿಮಿಷಗಳಲ್ಲಿ ಈ ಗೇಮ್‌ ವಶಪಡಿಸಿಕೊಂಡರು.

ದ್ವಿತೀಯ ಗೇಮ್‌ನಲ್ಲೂ ಪ್ರಣೀತ್‌ 9-6ರ ಮುನ್ನಡೆ ಸಾಧಿಸಿದ್ದರು. ಆದರೆ ಅಗ್ರ ಶ್ರೇಯಾಂಕದ ಮೊಮೊಟ ಸತತ 6 ಅಂಕಗಳನ್ನು ಗೆದ್ದು ತಿರುಗೇಟು ನೀಡಿದರು. 22 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು ಸತತ 2ನೇ ಬಾರಿಗೆ ತವರಿನ ಕೂಟದ ಫೈನಲ್‌ಗೆ ಲಗ್ಗೆ ಇರಿಸಿದರು.

ಜೊನಾಥನ್‌ ಕ್ರಿಸ್ಟಿ ಎದುರಾಳಿ
ಫೈನಲ್‌ನಲ್ಲಿ ಕೆಂಟೊ ಮೊಮೊಟ ಎದುರಾಳಿ ಇಂಡೋನೇಶ್ಯದ ಜೊನಾಥನ್‌ ಕ್ರಿಸ್ಟಿ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಡೆನ್ಮಾರ್ಕ್‌ನ ಜಾನ್‌ ಒ ಜೊರ್ಗೆನ್ಸನ್‌ ವಿರುದ್ಧ 21-14, 21-14 ಅಂತರದ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next